ಉಜಿರೆ ಪೇಟೆಯಲ್ಲಿ ತಡೆಗೋಡೆ ದಾಟಿದ ಕಾರು: ತಪ್ಪಿದ ಭಾರಿ ಅನಾಹುತ

Car

ಉಜಿರೆ ಪೇಟೆಯಲ್ಲಿ ತಡೆಗೋಡೆ ದಾಟಿದ ಕಾರು: ತಪ್ಪಿದ ಭಾರಿ ಅನಾಹುತ

ಉಜಿರೆ ಪೇಟೆಯ ಪ್ರಮುಖ ವಹಿವಾಟು ರಸ್ತೆಯಲ್ಲಿರುವ ಹೋಟೆಲ್‌ವೊಂದರ ಮುಂಭಾಗ ಭಾನುವಾರ ಕಾರೊಂದು ನಿಯಂತ್ರಣ ತಪ್ಪಿ ತಡೆಗೋಡೆ ದಾಟಿ ಒಳಗೆ ನುಗ್ಗಿದ ಅಪಾಯಕಾರಿ ಘಟನೆ ನಡೆದಿದೆ.

ಆದರೆ ಅದೃಷ್ಟವಶಾತ್ ಕಾರು ತಡೆಗೋಡೆಯಲ್ಲಿ ಸಿಕ್ಕಿಹಾಕಿಕೊಂಡು ನಿಂತ ಕಾರಣ, ಭಾರಿ ಅನಾಹುತ ಸಂಭವಿಸುವದು ತಪ್ಪಿದೆ. ಘಟನೆ ನಡೆದ ಸಂದರ್ಭ ರಸ್ತೆಯಲ್ಲಿ ಹಾಗೂ ಹೋಟೆಲ್‌ನ ಮುಂಭಾಗ ಜನಜಂಗುಳಿಯಿದ್ದರೂ ಕೂಡ ಯಾರಿಗೂ ಗಾಯಗಳಾಗದಿರುವುದು ಆಶ್ಚರ್ಯವಾಗಿದ್ದು, ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ.

  •  

Leave a Reply

You May Have Missed

error: Content is protected !!