ಧರ್ಮಸ್ಥಳದಲ್ಲಿ ಅಸ್ಥಿ ಉತ್ಖನನ; ಗುಂಡಿ 6ರಲ್ಲಿ ಸಿಕ್ಕ ಮೂಳೆ 40 ವರ್ಷ ಹಳೆಯದ್ದು

Dharmasthala

ಧರ್ಮಸ್ಥಳದಲ್ಲಿ ಅಸ್ಥಿ ಉತ್ಖನನ; ಗುಂಡಿ 6ರಲ್ಲಿ ಸಿಕ್ಕ ಮೂಳೆ 40 ವರ್ಷ ಹಳೆಯದ್ದು

ಮಂಗಳೂರು: ಧರ್ಮಸ್ಥಳದಲ್ಲಿ ಅಸ್ಥಿ ಉತ್ಖನನದ ವೇಳೆ 6ನೇ ಪಾಯಿಂಟ್‌ನಲ್ಲಿ ಸಿಕ್ಕ ಮೂಳೆ 40-50 ವರ್ಷ ಹಳೆಯದ್ದು ಎಂಬ ಮಾಹಿತಿ ಸಿಕ್ಕಿದೆ.

ಧರ್ಮಸ್ಥಳದ ನೇತ್ರಾವತಿ ತಟದಲ್ಲಿ ಅಸ್ಥಿ ಉತ್ಖನನ ನಡೆಯುತ್ತಿದೆ. ಈವರೆಗಿನ ಉತ್ಖನನದಲ್ಲಿ ಪಾಯಿಂಟ್ 6ರಲ್ಲಿ ಮಾತ್ರ ಅಸ್ಥಿ ಸಿಕ್ಕಿದೆ. ಗುಂಡಿ 6ರಲ್ಲಿ ಸಿಕ್ಕ ಮೂಳೆಗಳನ್ನು ಎಫ್‌ಎಸ್‌ಎಲ್‌ಗೆ ರವಾನಿಸಲಾಗಿದೆ. ಸಿಕ್ಕಿರುವ ಅಸ್ಥಿ 40-50 ವರ್ಷಗಳ ಹಿಂದಿನದ್ದು ಎಂಬ ಮಾಹಿತಿ ಲಭ್ಯವಾಗಿದೆ.

40 ವರ್ಷಗಳ ಹಿಂದೆ ಶವ ಹೂತಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಪ್ರಾಥಮಿಕ ಮಾಹಿತಿಗಳ ಪ್ರಕಾರ ಇದು ಪುರುಷನ ಅಸ್ಥಿಪಂಜರ. ಇನ್ನೊಂದು ವಾರದಲ್ಲಿ ಅಧಿಕೃತ ಮಾಹಿತಿ ಹೊರಬರಲಿದೆ.

ಅಸ್ಥಿ ಉತ್ಖನನಕ್ಕೆ ಭಾನುವಾರ ಬ್ರೇಕ್ ನೀಡಲಾಗಿದೆ. ಇದುವರೆಗೂ 10 ಪಾಯಿಂಟ್‌ಗಳಲ್ಲಿ ಉತ್ಖನನ ನಡೆದಿದೆ. ಆದರೆ, 6ನೇ ಪಾಯಿಂಟ್ ಬಿಟ್ಟರೆ ಯಾವುದರಲ್ಲೂ ಕುರುಹು ಪತ್ತೆಯಾಗಿಲ್ಲ. ಮತ್ತೆ ನಾಳೆ ಪಾಯಿಂಟ್ ನಂ. 11, 12, 13ರಲ್ಲಿ ಶೋಧ ಕಾರ್ಯಾಚರಣೆ ನಡೆಯಲಿದೆ. ಈ ಮೂರು ಸ್ಪಾಟ್‌ಗಳ ಬಗ್ಗೆ ಕುತೂಹಲ ಹೆಚ್ಚಿದೆ.

ಈ 3 ಸ್ಥಳಗಳಲ್ಲಿ ಸಾಕ್ಷ್ಯ ಸಿಗದಿದ್ದರೆ ಅನಾಮಿಕನ ವಿಚಾರಣೆ ಸಾಧ್ಯತೆಯಿದೆ. ಇತ್ತ ನೇತ್ರಾವತಿ ತಟದ ಪಾಯಿಂಟ್‌ಗಳಲ್ಲಿ ಬಿಗಿಭದ್ರತೆ ಹೆಚ್ಚಿಸಲಾಗಿದೆ. ಶೋಧ ನಡೆದ ಸ್ಥಳಗಳಲ್ಲಿ ಗನ್‌ಮ್ಯಾನ್ ನಿಯೋಜನೆ ಮಾಡಲಾಗಿದೆ. ನಾಳಿನ ಶೋಧ ನಡೆಸಲಿರುವ ಸ್ಥಳಗಳಲ್ಲೂ ಭದ್ರತೆ ಕಲ್ಪಿಸಲಾಗಿದೆ.

  •  

Leave a Reply

You May Have Missed

error: Content is protected !!