ಎಕ್ಸೆಲ್ ಅಕ್ಷರೋತ್ಸವದಲ್ಲಿ ಪವಿತ್ರಾ ದಿನೇಶ್ ಅವರ ‘ಗೋಮಾತೆ’ ಕವನ ಆಯ್ಕೆ

ಎಕ್ಸೆಲ್ ಅಕ್ಷರೋತ್ಸವದಲ್ಲಿ ಪವಿತ್ರಾ ದಿನೇಶ್ ಅವರ ‘ಗೋಮಾತೆ’ ಕವನ ಆಯ್ಕೆ

ಎಕ್ಸೆಲ್ ಅಕ್ಷರೋತ್ಸವದಲ್ಲಿ ಪವಿತ್ರಾ ದಿನೇಶ್ ಅವರ ‘ಗೋಮಾತೆ’ ಕವನ ಆಯ್ಕೆ

ಕೊಕ್ಕಡ : ಗುರುವಾಯನಕೆರೆ ಎಕ್ಸೆಲ್ ಪದವಿಪೂರ್ವ ಕಾಲೇಜು ವತಿಯಿಂದ ಆಯೋಜಿಸಲಾದ ಎಕ್ಸೆಲ್ ಅಕ್ಷರೋತ್ಸವ ನಾಡು–ನುಡಿಯ ರಾಷ್ಟ್ರೀಯ ಸಮ್ಮೇಳನ ಹಾಗೂ ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆಯ ದಶಮಾನೋತ್ಸವ ಕಾರ್ಯಕ್ರಮಕ್ಕೆ ದೇಶದ ಎಲ್ಲಾ ರಾಜ್ಯಗಳಿಂದ ಸಾವಿರಕ್ಕಿಂತಲೂ ಹೆಚ್ಚಿನ ಕವಿತೆಗಳು ಬಂದಿದ್ದು, ಅದರಲ್ಲಿ ಕೇವಲ 35 ಕವಿತೆಗಳು ಮಾತ್ರ ಆಯ್ಕೆಯಾಗಿವೆ.

ಈ ಆಯ್ಕೆಯಲ್ಲಿ ಪವಿತ್ರಾ ದಿನೇಶ್ ಕೊಕ್ಕಡ ಅವರ ‘ಗೋಮಾತೆ’ ಕವನ ಆಯ್ಕೆಗೊಂಡಿದೆ. ನ.27ರಂದು ನಡೆದ ಎಕ್ಸೆಲ್ ಪರ್ಬದ ‘ಅಕ್ಷರೋತ್ಸವ’ ಕವಿಗೋಷ್ಠಿಯಲ್ಲಿ ಪವಿತ್ರಾ ದಿನೇಶ್ ಅವರು ತಮ್ಮ ಆಯ್ಕೆಯಾದ ಕವಿತೆಯನ್ನು ವಾಚನ ಮಾಡಿ ಎಕ್ಸೆಲ್ ವತಿಯಿಂದ ಅಭಿನಂದನಾ ಗೌರವವನ್ನು ಸ್ವೀಕರಿಸಿದರು.

ಪವಿತ್ರಾ ದಿನೇಶ್ ಅವರು ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಹಳ್ಳಿಂಗೇರಿ ನಿವಾಸಿಯಾಗಿದ್ದು, ದಿನೇಶ್ ಅವರ ಪತ್ನಿ. ಪ್ರಸ್ತುತ ಪುತ್ತೂರು ತಾಲೂಕಿನ ಸ.ಹಿ.ಪ್ರಾ ಶಾಲೆ ಬಜತ್ತೂರು, ವಳಾಲು ಇಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

  •  

Leave a Reply

You May Have Missed

error: Content is protected !!