ನೂತನ ಧರ್ಮಾಧ್ಯಕ್ಷರಿಗೆ ನೆಲ್ಯಾಡಿಯಲ್ಲಿ ಸಂಘಟನೆಗಳಿಂದ ಸನ್ಮಾನ

ನೂತನ ಧರ್ಮಾಧ್ಯಕ್ಷರಿಗೆ ನೆಲ್ಯಾಡಿಯಲ್ಲಿ ಸಂಘಟನೆಗಳಿಂದ ಸನ್ಮಾನ

ನೂತನ ಧರ್ಮಾಧ್ಯಕ್ಷರಿಗೆ ನೆಲ್ಯಾಡಿಯಲ್ಲಿ ಸಂಘಟನೆಗಳಿಂದ ಸನ್ಮಾನ

ನೆಲ್ಯಾಡಿ: ಬೆಳ್ತಂಗಡಿ ಧರ್ಮ ಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಾಗಿ ಪೀಠಾರೋಹಣಗೊಂಡ ಪರಮಪೂಜ್ಯ ಅತಿ ವಂದನೀಯ ಮಾರ್ ಜೇಮ್ಸ್ ಪಟ್ಟೆರಿಲ್ ಸಿ.ಎಂ.ಎಫ್. ಅವರಿಗೆ ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದಲ್ಲಿ ಭವ್ಯ ಸನ್ಮಾನ ಕಾರ್ಯಕ್ರಮ ನೆರವೇರಿತು. ನೆಲ್ಯಾಡಿಯ ವರ್ತಕರು, ವಿವಿಧ ಸಂಘ ಸಂಸ್ಥೆಗಳು ಹಾಗೂ ಸಾಮಾಜಿಕ-ರಾಜಕೀಯ ಮುಖಂಡರ ಸಮ್ಮುಖದಲ್ಲಿ ಪೂಜ್ಯರಿಗೆ ಗೌರವ ಸಲ್ಲಿಸಲಾಯಿತು.

ಸಮಾರಂಭದಲ್ಲಿ ವರ್ತಕ ಸಂಘದ ಅಧ್ಯಕ್ಷ ಸತೀಶ್ ಕೆ.ಎಸ್., ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಸಿ.ಎಚ್., ಗೌರವಾಧ್ಯಕ್ಷ ರಫೀಕ್ ಸೀಗಲ್, ಸದಸ್ಯರು ಟೋಮಿ ಮಟ್ಟಮ್, ರಘುಲಾಲ್, ಗಣೇಶ್ ರಶ್ಮಿ, ಮುತಾಲಿಬ್ ಎಂ.ಆರ್., ದಿನೇಶ್ ಎಂ.ಟಿ., ರಿಚರ್ಡ್ ಫೆರ್ನಾಂಡಿಸ್, ಜೋಸೆಫ್ ಡಿ’ಸೋಜಾ, ಸಂತೋಷ್ ಹೊಸಮಜಲು ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.

ಇದೆ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ, ಕಟ್ಟಡ ಮಾಲಕರ ಸಂಘ, ರಿಕ್ಷಾ–ಟಾಕ್ಸಿ ಚಾಲಕ ಮಾಲಕರ ಸಂಘದ ಪದಾಧಿಕಾರಿಗಳು ಹಾಗೂ ಅನೇಕ ಸಾಮಾಜಿಕ ಮತ್ತು ರಾಜಕೀಯ ಮುಖಂಡರು ಬಾಗವಹಿಸಿ ಹೊಸ ಧರ್ಮಾಧ್ಯಕ್ಷರಿಗೆ ಶುಭ ಹಾರೈಸಿದರು.

  •  

Leave a Reply

You May Have Missed

error: Content is protected !!