ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದ ‘ವಾತ್ಸಲ್ಯ’ ಯೋಜನೆ — ಅಸಹಾಯಕ ಕುಟುಂಬಗಳಿಗೆ ವಾತ್ಸಲ್ಯ ಕಿಟ್ ವಿತರಣೆ

ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದ ‘ವಾತ್ಸಲ್ಯ’ ಯೋಜನೆ — ಅಸಹಾಯಕ ಕುಟುಂಬಗಳಿಗೆ ವಾತ್ಸಲ್ಯ ಕಿಟ್ ವಿತರಣೆ

ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದ ‘ವಾತ್ಸಲ್ಯ’ ಯೋಜನೆ — ಅಸಹಾಯಕ ಕುಟುಂಬಗಳಿಗೆ ವಾತ್ಸಲ್ಯ ಕಿಟ್ ವಿತರಣೆ

ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಡಬ ತಾಲೂಕಿನ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದಡಿಯಲ್ಲಿ ನಡೆಯುವ ಮಾತೃಶ್ರೀ ಅಮ್ಮನವರ ಆಶಯದ “ವಾತ್ಸಲ್ಯ” ಯೋಜನೆಯಡಿ ನೆಲ್ಯಾಡಿ ವಲಯದ ಪಡುಬೆಟ್ಟು ಕಾರ್ಯಕ್ಷೇತ್ರದ ಹಸೀನವರ ಕುಟುಂಬಕ್ಕೆ ಹಾಗೂ ಕೌಕ್ರಾಡಿ ಅಸ್ಲಾಂ ಪಾಷಾ ಅವರ ಕುಟುಂಬಕ್ಕೆ ದಿನಬಳಕೆಯ ವಸ್ತುಗಳಿಂದ ತುಂಬಿದ ವಾತ್ಸಲ್ಯ ಕಿಟ್ ಅನ್ನು ದಕ್ಷಿಣ ಕನ್ನಡ–2 ಜಿಲ್ಲೆಯ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ ಅವರು ಹಸ್ತಾಂತರಿಸಿದರು.

ಕಡಬ ತಾಲೂಕಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಒಟ್ಟು 60 ಮಂದಿ ಅತೀ ಬಡ ಕುಟುಂಬಗಳಿಗೆ ಪ್ರತಿ ತಿಂಗಳು ₹65ರ ಮಾಶಾಸನ ನೀಡಲಾಗುತ್ತಿದ್ದು, ವರ್ಷಕ್ಕೆ ₹6,96,000 ಸಹಾಯದ ಮೂಲಕ ನಿಜವಾದ ಅಸಹಾಯಕ ಕುಟುಂಬಗಳಿಗೆ ಪೂರಕ ನೆರವು ಒದಗಿಸಲಾಗುತ್ತಿದೆ. ಇಲ್ಲಿಯವರೆಗೆ 50ಕ್ಕೂ ಹೆಚ್ಚು ಸದಸ್ಯರಿಗೆ ವಾತ್ಸಲ್ಯ ಕಿಟ್ ವಿತರಣೆ ಮಾಡಲಾಗಿದ್ದು, ವಾಸಿಸಲು ಮನೆ ಇಲ್ಲದ ಮಟ್ಟಿಗೆ ಬಡತನದಲ್ಲಿರುವ ವಾತ್ಸಲ್ಯ ಯೋಜನೆಯ ಸದಸ್ಯರಿಗೆ 7 ವಾತ್ಸಲ್ಯ ಮನೆಗಳನ್ನು ನಿರ್ಮಿಸಿ–ರಿಪೇರಿ ಮಾಡಿ ನೀಡಲಾಗಿದೆ ಎಂದು ಜಿಲ್ಲಾ ನಿರ್ದೇಶಕ ಬಾಬು ನಾಯ್ಕ ಅವರು ತಿಳಿಸಿದ್ದಾರೆ.

ತಾಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್, ವಲಯ ಮೇಲ್ವಿಚಾರಕ ಆನಂದ ಡಿ.ಬಿ, ಜ್ಞಾನವಿಕಾಸ ಸಮನ್ವಯಾಧಿಕಾರಿ ಚೇತನ, ಪಡುಬೆಟ್ಟು ಒಕ್ಕೂಟದ ಸೇವಾಪ್ರತಿನಿಧಿ ಮೋಹಿನಿ, ಕೌಕ್ರಾಡಿ ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ ಗೌಡ ಹಾಗೂ ಪಡುಬೆಟ್ಟು ಒಕ್ಕೂಟದ ಅಧ್ಯಕ್ಷ ಜಾನ್ ಮಂತೆರೋ ಉಪಸ್ಥಿತರಿದ್ದರು.

Leave a Reply

You May Have Missed

error: Content is protected !!