‘ಸಂಪೂರ್ಣ ಸುರಕ್ಷಾ’ ಮಾಹಿತಿ ಕಾರ್ಯಕ್ರಮ

‘ಸಂಪೂರ್ಣ ಸುರಕ್ಷಾ’ ಮಾಹಿತಿ ಕಾರ್ಯಕ್ರಮ

‘ಸಂಪೂರ್ಣ ಸುರಕ್ಷಾ’ ಮಾಹಿತಿ ಕಾರ್ಯಕ್ರಮ

ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಕಡಬ ತಾಲೂಕಿನ ನೆಲ್ಯಾಡಿ ವಲಯದ ಕೌಕ್ರಾಡಿ ಕಾರ್ಯಕ್ಷೇತ್ರದ ವತಿಯಿಂದ 2026-27ನೇ ಸಾಲಿನ ಸಂಪೂರ್ಣ ಸುರಕ್ಷಾ ಮಾಹಿತಿ ಕಾರ್ಯಕ್ರಮ ಅಡೀಲು ಸೇಸಪ್ಪ ಗೌಡರ ಮನೆಯಲ್ಲಿ ನಡೆಯಿತು.

ವಲಯ ಮೇಲ್ವಿಚಾರಕ ಆನಂದ ಡಿ.ಬಿ. ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸಂಪೂರ್ಣ ಸುರಕ್ಷಾ ಯೋಜನೆಯ ಅಡಿಯಲ್ಲಿ ಸಂಘದ ಸದಸ್ಯರು ಹಾಗೂ ಅವರ ಕುಟುಂಬಗಳಿಗೆ ವಿಮಾ ಕಂಪನಿಗಳ ಮೂಲಕ ಚಿಕಿತ್ಸಾ ವೆಚ್ಚ ಮರುಪಾವತಿ, ಹೆರಿಗೆ ವೆಚ್ಚ ಮರುಪಾವತಿ, ಅಪಘಾತ ವಿಮೆ ಸೇರಿದಂತೆ ವಿವಿಧ ಸಮಾಜಮುಖಿ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು. ಅದೇ ರೀತಿ ನೋಂದಣಿ ಮಾಡಿಸದಿರುವ ಸದಸ್ಯರಿಗೆ ಆರೋಗ್ಯ ರಕ್ಷಾ ವಿಮೆ, ಚಿಕಿತ್ಸೆ ವೆಚ್ಚ ಗಳಿಸುವ ವಿಧಾನ, ಸಲ್ಲಿಸಬೇಕಾದ ದಾಖಲೆ ಸೇರಿದಂತೆ ಯೋಜನೆಯ ಎಲ್ಲಾ ಅಂಶಗಳ ಕುರಿತು ವಿವರವಾದ ಹಾಗೂ ಆರ್ಥಪೂರ್ಣ ಮಾಹಿತಿ ನೀಡಿದರು.

ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ ಗೌಡ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಸೇವಾಪ್ರತಿನಿಧಿ ನಮಿತಾ ಶೆಟ್ಟಿ ನಿರೂಪಿಸಿದರು. ಜಯಂತಿ ಸ್ವಾಗತಿಸಿ, ಕುಮುದ ವಂದಿಸಿದರು. ಮಾಹಿತಿ ಕಾರ್ಯಕ್ರಮದಲ್ಲಿ ಒಟ್ಟು 5 ತಂಡದ ಸದಸ್ಯರು ಭಾಗವಹಿಸಿದ್ದರು.

Previous post

ಕೌಕ್ರಾಡಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಜಾಗ ಪರಿಶೀಲನೆ: ಗ್ಯಾರಂಟಿ ಯೋಜನೆ ಸಮಿತಿಯಿಂದ ಗಡಿ ಗುರುತಿಗೆ ಒತ್ತಾಯ

Next post

ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದ ‘ವಾತ್ಸಲ್ಯ’ ಯೋಜನೆ — ಅಸಹಾಯಕ ಕುಟುಂಬಗಳಿಗೆ ವಾತ್ಸಲ್ಯ ಕಿಟ್ ವಿತರಣೆ

Leave a Reply

You May Have Missed

error: Content is protected !!