ಮದ್ಯದ ಬದಲು ಕೀಟನಾಶಕ ಸೇವನೆ: ಯುವಕ ವೆನ್ಲಾಕ್ ಆಸ್ಪತ್ರೆಗೆ ದಾಖಲು

ಮದ್ಯದ ಬದಲು ಕೀಟನಾಶಕ ಸೇವನೆ: ಯುವಕ ವೆನ್ಲಾಕ್ ಆಸ್ಪತ್ರೆಗೆ ದಾಖಲು

ಮದ್ಯದ ಬದಲು ಕೀಟನಾಶಕ ಸೇವನೆ: ಯುವಕ ವೆನ್ಲಾಕ್ ಆಸ್ಪತ್ರೆಗೆ ದಾಖಲು

ಮದ್ಯದ ಬದಲು ಕೀಟನಾಶಕ ಸೇವನೆ: ಯುವಕ ವೆನ್ಲಾಕ್ ಆಸ್ಪತ್ರೆಗೆ ದಾಖಲು

ಕೊಕ್ಕಡ: ಮದ್ಯ ಸೇವಿಸುವ ವೇಳೆ ಕಣ್ತಪ್ಪಿನಿಂದ ಕೀಟನಾಶಕ ಸೇವಿಸಿದ ಪರಿಣಾಮ ಯುವಕನೊಬ್ಬ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದಲ್ಲಿ ವರದಿಯಾಗಿದೆ.

ಶಿಬಾಜೆ ನಿವಾಸಿ ಹರೀಶ್ ಮುಗೇರ ಎಂಬವರು ಬುಧವಾರ ಅನಾರೋಗ್ಯಕ್ಕೀಡಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಾದ ಬಗ್ಗೆ ವೈದ್ಯಕೀಯ ಸೂಚನಾ ಪತ್ರ ಬಂದ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಅವರನ್ನು ವಿಚಾರಣೆ ನಡೆಸಿ ವಿಡಿಯೋ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.

ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಬುಧವಾರ ರಾತ್ರಿ ತನ್ನ ಮನೆಯಲ್ಲಿ ತಂದಿರಿಸಿದ್ದ ಮದ್ಯವನ್ನು ಸೇವಿಸಲು ತೆರೆಯುವಾಗ ಕಣ್ತಪ್ಪಿನಿಂದ ಮದ್ಯದ ಬಾಟಲಿಯ ಬಳಿಯಲ್ಲಿದ್ದ ಕೀಟನಾಶಕದ ಬಾಟಲಿಯನ್ನು ತೆಗೆದು ಸೇವಿಸಿದ್ದಾಗಿ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ನಂತರ ಆರೋಗ್ಯದಲ್ಲಿ ಏರುಪೇರು ಉಂಟಾದ ಹಿನ್ನೆಲೆಯಲ್ಲಿ ಅವರ ಪತ್ನಿ ಹಾಗೂ ಜೊತೆಯಲ್ಲಿ ಕೆಲಸ ಮಾಡುತ್ತಿದ್ದವರು ತಕ್ಷಣವೇ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ತಾನು ಮದ್ಯದ ಬದಲು ಆಕಸ್ಮಿಕವಾಗಿ ಕೀಟನಾಶಕ ಸೇವಿಸಿದ್ದಾಗಿ ತಿಳಿಸಿರುವ ಅವರು, ಈ ಕುರಿತು ಯಾವುದೇ ಕಾನೂನು ಕ್ರಮ ಕೈಗೊಳ್ಳುವ ಅಗತ್ಯವಿಲ್ಲವೆಂದು ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.

ಈ ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸುವ ಸಲುವಾಗಿ ಸದ್ರಿ ವ್ಯಕ್ತಿಗೆ ತಜ್ಞರಿಂದ ಆಪ್ತ ಸಮಾಲೋಚನೆ ನಡೆಸುವಂತೆ ಜಿಲ್ಲಾ ವೈದ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ. ಮುಂದಿನ ಹೇಳಿಕೆಯ ಆಧಾರದ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದಾಗಿ ತಿಳಿದುಬಂದಿದೆ.

Leave a Reply

You May Have Missed

error: Content is protected !!