ದೇಶ / ವಿದೇಶ
# accident #kadaba #shiradi #nellyady #ksrtc, #KOKKADA: ಶಿಬಾಜೆ ಶ್ರೀಧರ ಕೊಲೆ ಪ್ರಕರಣಕ್ಕೆ ಮರು ತನಿಖೆ — ರಾಜ್ಯ ಸರ್ಕಾರದಿಂದ ಎಸ್ಐಟಿ ನೇಮಕ, #ಅರಸಿನಮಕ್ಕಿ ಬೂಡುಮುಗೇರು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಶೀರೂರು ಶ್ರೀ ವೇದವರ್ಧನ ಸ್ವಾಮೀಜಿ ಭೇಟಿ – ಪೂರ್ಣ ಕುಂಭ ಸ್ವಾಗತ, #ಉಜಿರೆ ಎಸ್ಡಿಎಂ ಪದವಿ ಪೂರ್ವ ಕಾಲೇಜಿನ ಎನ್ಎಸ್ಎಸ್ ವಾರ್ಷಿಕ ಚಟುವಟಿಕೆಗಳ ಸಮಾರೋಪ, #ಉದನೆ ಸೈಂಟ್ ಆಂಟನೀಸ್ ವಿದ್ಯಾಸಂಸ್ಥೆಯಲ್ಲಿ ಪ್ರತಿಭಾ ದಿನೋತ್ಸವ, #ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್, #ಕುಡ್ತಾಜೆ: ಶ್ರೀ ಉಳ್ಳಾಕ್ಲು ರುದ್ರ ಚಾಮುಂಡಿ, #ಗುಂಡ್ಯ: ಅಂಬ್ಯುಲೆನ್ಸ್ ವಾಹನ ಕಳವು ಪ್ರಕರಣ: ಆರೋಪಿ ಹಾಸನದಲ್ಲಿ ಬಂಧನ, #ಚಲನಚಿತ್ರ ನಟಿ ಶ್ರುತಿ ಕುಕ್ಕೆ ಸುಬ್ರಹ್ಮಣ್ಯ ಭೇಟಿ, #ಜ.22ರಂದು ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ 108 ಕಾಯಿ ಗಣಹೋಮ, #ನೆಲ್ಯಾಡಿ ನಿವಾಸಿ ಕೆ.ಸಿ. ವರ್ಗೀಸ್ ಸಾವು ಪ್ರಕರಣ – ಶವ ಪರೀಕ್ಷೆಯಲ್ಲಿ ಬಯಲಾದ ರಹಸ್ಯ: ಬಲವಾದ ಪೆಟ್ಟುಗಳಿಂದ ಮರಣ, #ನೆಲ್ಯಾಡಿ: ಎಸ್ಸಿ/ಎಸ್ಟಿ ಫಲಾನುಭವಿಗಳಿಗೆ ಟ್ಯಾಂಕ್, #ನೆಲ್ಯಾಡಿ: ಪರವಾನಗಿ ಇಲ್ಲದೆ ಅಕ್ರಮ ಮರ ಸಾಗಾಟ ಪತ್ತೆ: ಲಾರಿ, #ರಾಮಕುಂಜ: ಬಾವಿ ತೋಡಲು ಸ್ಪೋಟಕ ಬಳಕೆ, #ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಕಾರು – 11 ಕೆವಿ ಕಂಬ ತುಂಡು
0 Comments
ನೆಲ್ಯಾಡಿ ಸೆಂಟ್ ಅಲ್ಫೋನ್ಸ ಎಸ್‌ಎಂವೈಎಂ ವತಿಯಿಂದ ಪಂಚಾಯತ್‌ಗೆ ಡಸ್ಟ್‌ಬಿನ್ ವಿತರಣೆ






ನೆಲ್ಯಾಡಿ: ಗ್ರಾಮ ನೈರ್ಮಲ್ಯವನ್ನು ಉತ್ತೇಜಿಸುವ ದೃಷ್ಟಿಯಿಂದ ನೆಲ್ಯಾಡಿಯ ಸೆಂಟ್ ಅಲ್ಫೋನ್ಸ ಪುಣ್ಯಕ್ಷೇತ್ರದ ಸೀರೋ ಮಲಬಾರ್ ಯೂತ್ ಮೂವ್ಮೆಂಟ್ (ಎಸ್‌ಎಂವೈಎಂ) ಉತ್ಸಾಹಿ ಯುವಕರ ಬಳಗವು ನೆಲ್ಯಾಡಿ ಪೇಟೆ ಪ್ರದೇಶದ ಪ್ರಮುಖ ರಸ್ತೆ, ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯವನ್ನು ನಡೆಸಿ, ನಂತರ ನೆಲ್ಯಾಡಿ ಗ್ರಾಮ ಪಂಚಾಯತ್‌ಗೆ ಐದು ಡಸ್ಟ್‌ಬಿನ್‌ಗಳನ್ನು ಹಸ್ತಾಂತರ ಮಾಡಿತು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯರಾಜ್ ಹಾಗೂ ಕಾರ್ಯದರ್ಶಿ ಭಾರತಿ ಅವರ ಸಮ್ಮುಖದಲ್ಲಿ ಪಂಚಾಯತ್ ಸಿಬ್ಬಂದಿ ಡಸ್ಟ್‌ಬಿನ್‌ಗಳನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಡಸ್ಟ್‌ಬಿನ್‌ಗಳ ಹಸ್ತಾಂತರವು ಗ್ರಾಮದಲ್ಲಿ ಕಸ ವಿಲೇವಾರಿ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸಲು ನೆರವಾಗಲಿದೆ. ಸಾರ್ವಜನಿಕರು ಸಹ ಈ ಸೌಲಭ್ಯವನ್ನು ಸರಿಯಾಗಿ ಬಳಸಿಕೊಂಡು ನೈರ್ಮಲ್ಯ ಕಾಪಾಡಲು ಸಹಕರಿಸಬೇಕು ಎಂದು ಹೇಳಿದರು.
ಸ್ವಚ್ಛತಾ ಕಾರ್ಯಕ್ಕೆ ಸಂಘ ಸಂಸ್ಥೆಗಳ ಸಹಕಾರ ಅತ್ಯಂತ ಅಗತ್ಯವಾಗಿದ್ದು, ಪಂಚಾಯತ್ ಮುಖಾಂತರ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿ “ಸ್ವಚ್ಛ ಭಾರತ” ಪರಿಕಲ್ಪನೆಯನ್ನು ಜೀವಂತವಾಗಿಡಬೇಕು ಎಂದು ಸೆಂಟ್ ಅಲ್ಫೋನ್ಸ ಚರ್ಚ್ ಧರ್ಮಗುರು ವಂ.ಫಾ.ಶಾಜಿ ಮಾತ್ಯು ಹೇಳಿದರು.
ಯುವ ಮುಂದಾಳುಗಳಾದ ತೋಮಸ್, ಅಬಿನ್, ಡಿನು, ನವೀನ್, ದಿಶಾ, ಸನೂಷ, ಅರ್ಚನಾ, ಅಲೀನಾ ಥೋಮಸ್, ಶಾನ್, ಜೈಸನ್ ಮತ್ತು ಜೋಯಲ್ ಅವರು ಕಾರ್ಯಕ್ರಮದ ಸಾರಥ್ಯ ವಹಿಸಿದರು.
ಕಾರ್ಯಕ್ರಮಕ್ಕೆ ಸಿರಿಯನ್ ಕ್ಯಾಥೋಲಿಕ್ ಸಹಕಾರಿ ಬ್ಯಾಂಕ್ ನೆಲ್ಯಾಡಿ, ಜಿನೋಯ್ ರಿಯಾ ರಬ್ಬರ್ಸ್, ಸೀಗಲ್ ಟ್ರೇಡರ್ಸ್, ಈಪನ್ ವರ್ಗೀಸ್, ಓ.ಜಿ. ನೈನಾನ್, ಜೆನಿ ರಾಜಸ್ಥಾನ್ ಮಾರ್ಬಲ್ಸ್, ಸೆಂಟ್ ಅಲ್ಫೋನ್ಸ ಕ್ರೆಡಿಟ್ ಯೂನಿಯನ್, ಜೇಮ್ಸ್ ಜೀಸಸ್ ಟಯರ್ಸ್, ಸಿ.ಸಿ.ಎಂ.ಎಲ್ ಸೆಂಟ್ ಅಲ್ಫೋನ್ಸ ಚರ್ಚ್, ಜೋಸೆಫ್ ಎಂಬ್ರಾಂಡಿವಯಲಿಲ್, ಪೌಲ್ ಡಿಸೋಜ ಹಾಗೂ ಲೇಸರ್ ಕಾರ್ ವಾಶ್ ಇವರು ಆರ್ಥಿಕ ಸಹಾಯ ನೀಡಿ ಸಹಕರಿಸಿದರು.
ಚರ್ಚ್ ಪಾಲನ ಸಮಿತಿಯ ರಾಜೇಶ್, ಜೋನ್ಸನ್, ಜೋಯ್, ರೆಜಿ ಸುಜಾ ಜೇಮ್ಸ್, ಸಣ್ಣಿ, ಶಿಬು ಮೊದಲಾದವರು ಕಾರ್ಯಕ್ರಮದಲ್ಲಿ ಬಾಗವಹಿಸಿದರು.





















Leave a Reply