ನೆಲ್ಯಾಡಿ: ಜೆಸಿಐ ಘಟಕದಿಂದ ಓರಿಯೆಂಟೇಷನ್ ಕಾರ್ಯಕ್ರಮ

ನೆಲ್ಯಾಡಿ ಜೆಸಿಐ ಘಟಕದ ವತಿಯಿಂದ ಓರಿಯೆಂಟೇಷನ್ ಕಾರ್ಯಕ್ರಮ

ನೆಲ್ಯಾಡಿ: ಜೆಸಿಐ ಘಟಕದಿಂದ ಓರಿಯೆಂಟೇಷನ್ ಕಾರ್ಯಕ್ರಮ

ನೆಲ್ಯಾಡಿ ಜೆಸಿಐ ಘಟಕದ ವತಿಯಿಂದ ಓರಿಯೆಂಟೇಷನ್ ಕಾರ್ಯಕ್ರಮ

ನೆಲ್ಯಾಡಿ: ನೆಲ್ಯಾಡಿ ಜೆಸಿಐ ಘಟಕದ ವತಿಯಿಂದ ಜೆಸಿಯೇತರ ಬಂದುಗಳಿಗೆ ಆಯೋಜಿಸಲಾದ ಓರಿಯೆಂಟೇಷನ್ ಕಾರ್ಯಕ್ರಮವು ದುರ್ಗಾ ಶ್ರೀ ಟವರ್‌ನಲ್ಲಿ ಅರ್ಥಪೂರ್ಣವಾಗಿ ಸಂಘಟನೆಯ ಉದ್ದೇಶ, ಕಾರ್ಯಚಟುವಟಿಕೆಗಳು ಹಾಗೂ ಯುವಜನತೆಯ ಅಭಿವೃದ್ಧಿಯಲ್ಲಿ ಜೆಸಿಐಯ ಪಾತ್ರವನ್ನು ಪರಿಚಯಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಜೆಸಿ ಪೂರ್ವ ರಾಜ್ಯ ಉಪಾಧ್ಯಕ್ಷರು ಹಾಗೂ ನೆಲ್ಯಾಡಿ ಜೆಸಿಯ ಪೂರ್ವಾಧ್ಯಕ್ಷ ರವೀಂದ್ರ ಟಿ ಅವರು ತಮ್ಮ 43 ವರ್ಷಗಳ ದೀರ್ಘ ಅನುಭವದ ಆಧಾರದ ಮೇಲೆ ಸಂಘಟನೆಯ ಬೆಳವಣಿಗೆ, ನಾಯಕತ್ವ ಕೌಶಲ್ಯಗಳ ಅಭಿವೃದ್ಧಿ ಹಾಗೂ ಸಮಾಜಮುಖಿ ಕಾರ್ಯಗಳ ಮಹತ್ವವನ್ನು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನೆಲ್ಯಾಡಿ ಜೆಸಿಐ ಅಧ್ಯಕ್ಷೆ ಪ್ರವೀಣಿ ಶೆಟ್ಟಿ ಅವರು ಸ್ವಾಗತಿಸಿ ಕಾರ್ಯಕ್ರಮದ ಮಹತ್ವವನ್ನು ವಿವರಿಸಿದರು. ಅತಿಥಿಯಾಗಿ ಭಾಗವಹಿಸಿದ ಸಂದ್ಯಾ ಅವಿನಾಶ್ ರೈ ಅವರು ಸಂಘಟನೆಯ ಚಟುವಟಿಕೆಗಳನ್ನು ಮೆಚ್ಚಿ, ಯುವಜನತೆ ಇಂತಹ ವೇದಿಕೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ದೀಪಕ್ ನೆಲ್ಯಾಡಿ ಜೆಸಿ ವಾಣಿ ವಾಚಿಸಿದರು. ಸುಪ್ರಿತಾ ರವಿಚಂದ್ರ ಅತಿಥಿಗಳನ್ನು ಪರಿಚಯಿಸಿದರು. ರೇಷ್ಮಾ ನಿರೂಪಿಸಿದರು. ಕಾರ್ಯದರ್ಶಿ ಶ್ರೇಯಸ್ ಶೆಟ್ಟಿ ವಂದಿಸಿದರು.

Leave a Reply

You May Have Missed

error: Content is protected !!