ನೆಲ್ಯಾಡಿ ಯುವಕನೋರ್ವ ಉಡುಪಿ ವಸತಿ ಗೃಹವೊಂದರಲ್ಲಿ ನೇಣುಬಿಗಿದು  ಆತ್ಮಹತ್ಯೆ

ನೆಲ್ಯಾಡಿ ಯುವಕನೋರ್ವ ಉಡುಪಿ ವಸತಿ ಗೃಹವೊಂದರಲ್ಲಿ ನೇಣುಬಿಗಿದು ಆತ್ಮಹತ್ಯೆ

ನೆಲ್ಯಾಡಿ ಯುವಕನೋರ್ವ ಉಡುಪಿ ವಸತಿ ಗೃಹವೊಂದರಲ್ಲಿ ನೇಣುಬಿಗಿದು  ಆತ್ಮಹತ್ಯೆ

ನೆಲ್ಯಾಡಿ ಯುವಕನೋರ್ವ ಉಡುಪಿ ವಸತಿ ಗೃಹವೊಂದರಲ್ಲಿ ನೇಣುಬಿಗಿದು  ಆತ್ಮಹತ್ಯೆ

ನೆಲ್ಯಾಡಿ : ಉಡುಪಿ ನಗರದ ಹಳೆ ಸರಕಾರಿ ಬಸ್ ನಿಲ್ದಾಣದ ಸನಿಹದಲ್ಲಿರುವ ವಸತಿ ಗೃಹವೊಂದರಲ್ಲಿ ಕೊಠಡಿ ಪಡೆದುಕೊಂಡಿದ್ದ ವ್ಯಕ್ತಿಯೊಬ್ಬರು ಫ್ಯಾನಿಗೆ ಬಟ್ಟೆಯಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರದಂದು ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಜಿನ್ಸನ್ ಪಿ.ಎಂ (ವಯಸ್ಸು ತಿಳಿದುಬಂದಿಲ್ಲ) ಎಂದು ಗುರುತಿಸಲಾಗಿದ್ದು, ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನೆಲ್ಯಾಡಿ ಸಮೀಪದ ಕೌಕ್ರಾಡಿ ಗ್ರಾಮದ ಹೊಸಮಜಲು ನಿವಾಸಿ ಎಂದು ತಿಳಿದುಬಂದಿದೆ. ಪ್ರಸ್ತುತ ಮಂಗಳೂರಿನಲ್ಲಿ ಪತ್ನಿ ಹಾಗೂ ಮಕ್ಕಳೊಂದಿಗೆ ವಾಸವಾಗಿದ್ದರು 

ಘಟನೆಯ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ನಗರ ಪೊಲೀಸ್ ಠಾಣೆಯ ಠಾಣಾಧಿಕಾರಿ ಭರತೇಶ್, ಪಿಎಸ್‌ಐ ನಾರಾಯಣ ಹಾಗೂ ಎಎಸ್‌ಐ ವಿಜಯ್ ಭೇಟಿ ನೀಡಿ ಪರಿಶೀಲನೆ ನಡೆಸಿ ಮಹಜರು ಪ್ರಕ್ರಿಯೆ ಕೈಗೊಂಡರು.

ಸಮಾಜಸೇವಕ ನಿತ್ಯಾನಂದ ಒಳಕಾಡುವರು ಮೃತದೇಹವನ್ನು ಉಡುಪಿ ಜಿಲ್ಲಾಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ನೆರವಾದರು. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

 ಮೃತರಿಗೆ ಪತ್ನಿ, ಇಬ್ಬರು ಗಂಡು ಮಕ್ಕಳು, ತಾಯಿ,ತಂದೆ ಸಹೋದರ ಇದ್ದಾರೆ

Previous post

ಸಂಚಾರ ನಿಯಮ ಉಲ್ಲಂಘನೆ ಪ್ರಕರಣ: ಸಮುದಾಯ ಸೇವೆ ವೈರಲ್ ಹಿನ್ನೆಲೆ ವಿಷ ಸೇವಿಸಿ ಯುವಕ ಆತ್ಮಹತ್ಯೆಗೆ ಯತ್ನ

Next post

ಬೆಳ್ತಂಗಡಿಯಲ್ಲಿ ಕೋಟ್ಯಂತರ ವಂಚನೆ ಹಗರಣ: ಶ್ರೀರಾಮ ಕ್ರೆಡಿಟ್ ಸೊಸೈಟಿ ವಿರುದ್ಧ 40ಕೋಟಿ ರೂ.ವಂಚನೆ ಆರೋಪ;ಸಿಐಡಿ ತನಿಖೆ ಆರಂಭ

Leave a Reply

You May Have Missed

error: Content is protected !!