ನೆಲ್ಯಾಡಿ ಸಂತಜಾರ್ಜ್ ಪ.ಪೂ.ಕಾಲೇಜಿಗೆ ವಾಣಿಜ್ಯ ವಿಭಾಗದಲ್ಲಿ ಆಯಿಷಾತ್ ಫಾಹಿಮಾ ಕಾಲೇಜಿಗೆ ಪ್ರಥಮ

ನೆಲ್ಯಾಡಿ: 2025-26ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ನೆಲ್ಯಾಡಿ ಸಂತ ಜಾರ್ಜ್ ಪ.ಪೂ. ಕಾಲೇಜು ವಾಣಿಜ್ಯ ವಿಭಾಗದಲ್ಲಿ ಶೇ.100 ತೇರ್ಗಡೆ ಫಲಿತಾಂಶ ದಾಖಲಿಸಿದೆ. ಕಲಾ ವಿಭಾಗದಲ್ಲಿಯೂ 96.15 ಶೇಕಡಾ ಫಲಿತಾಂಶ ಬಂದಿದೆ.

ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿನಿ ಆಯಿಷಾತ್ ಫಾಹಿಮಾ ಮರುಮೌಲ್ಯಮಾಪನದ ಮೂಲಕ ತಮ್ಮ ಅಂಕಗಳನ್ನು ಗಮನಾರ್ಹವಾಗಿ ಹೆಚ್ಚಿಸಿಕೊಂಡು ಕಾಲೇಜಿಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇಂಗ್ಲೀಷ್ ವಿಷಯದಲ್ಲಿ ಆರಂಭದಲ್ಲಿ ಪಡೆದಿದ್ದ 89 ಅಂಕಗಳು ಮರುಮೌಲ್ಯಮಾಪನದ ಬಳಿಕ 92ಕ್ಕೆ ಏರಿಕೆಯಾದರೆ, ಬಿಸಿನೆಸ್ ಸ್ಟಡೀಸ್‌ನಲ್ಲಿ 95 ಅಂಕಗಳು 100ಕ್ಕೆ ಏರಿಕೆ ಕಂಡಿವೆ. ಅಕೌಂಟೆನ್ಸಿ ವಿಷಯದಲ್ಲಿ 98 ಅಂಕಗಳು 99ಕ್ಕೆ ಹೆಚ್ಚಳವಾಗಿವೆ. ಈ ಮೂಲಕ ಒಟ್ಟು 577 ಅಂಕಗಳ ಬದಲು 586 ಅಂಕಗಳನ್ನು ಪಡೆದು ಅವರು ಕಾಲೇಜಿನಲ್ಲಿ ಅಗ್ರಸ್ಥಾನ ಗಳಿಸಿದ್ದಾರೆ.

ಆಯಿಷಾತ್ ಫಾಹಿಮಾ ಅವರು ನೆಲ್ಯಾಡಿಯ ನೋಟರಿ ವಕೀಲರಾದ ಇಸ್ಮಾಯಿಲ್ ಹಾಗೂ ಮಾಜಿದಾ ಅವರ ಪುತ್ರಿಯಾಗಿದ್ದಾರೆ.

ವಿದ್ಯಾರ್ಥಿನಿಯ ಈ ಸಾಧನೆಗೆ ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ ಅಬ್ರಹಾಂ ವರ್ಗೀಸ್, ವಿದ್ಯಾಸಂಸ್ಥೆಯ ಸಂಚಾಲಕರಾದ ಫಾ.ನೋಮಿಸ್ ಕುರಿಯಾಕೋಸ್, ಕಾಲೇಜಿನ ಪ್ರಾಚಾರ್ಯ ಏಲಿಯಾಸ್ ಎಂ.ಕೆ ಉಪನ್ಯಾಸಕ ವೃಂದ, ಅಧ್ಯಾಪಕ ವೃಂದ ಹಾಗೂ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.

Leave a Reply

You May Have Missed

error: Content is protected !!