ಬೆಳ್ತಂಗಡಿ : ಬೆಳಾಲು ವಿಷ ಸೇವಿಸಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಿಸದೆ ಸಾವು

ಬೆಳ್ತಂಗಡಿ : ಬೆಳಾಲು ವಿಷ ಸೇವಿಸಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಿಸದೆ ಸಾವು

ಬೆಳ್ತಂಗಡಿ : ಬೆಳಾಲು ವಿಷ ಸೇವಿಸಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಿಸದೆ ಸಾವು

ಬೆಳ್ತಂಗಡಿ : ಬೆಳಾಲು ವಿಷ ಸೇವಿಸಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಿಸದೆ ಸಾವು

ಬೆಳ್ತಂಗಡಿ : ಪ್ರೇಮ ಪ್ರಕರಣದಲ್ಲಿ ಭಯಗೊಂಡು ಇಲಿಪಾಷಣ ತೆಗೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಮಾಯದ ಬಾಳೆಮಂಡಿಕಲ್ಲು ನಿವಾಸಿ ದಿನೇಶ್ ನಾಯ್ಕ್ ಮತ್ತು ರೇವತಿ ದಂಪತಿಗಳ ಎರಡನೇ ಪುತ್ರಿ ರಮ(19) ಎಂಬಾಕೆ ಕಳೆದ ಎ.25 ರಂದು ರಾತ್ರಿ ಮನೆಯಲ್ಲಿ ಇಲಿಪಾಷಣ ತೆಗೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು. ಬಳಿಕ ಮಂಗಳೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತಿತ್ತು, ಆದ್ರೆ ಚಿಕಿತ್ಸೆ ಫಲಿಸದೆ ರಮ ಎ.29 ರಂದು ರಾತ್ರಿ 12 ಗಂಟೆಗೆ ಸಾವನ್ನಪ್ಪಿದ್ದಾಳೆ.

ರಮ ವಾಮದಪದವು ಕಾಲೇಜ್ ನಲ್ಲಿ ಎರಡನೇ ವರ್ಷದ ಪದವಿ ವಿದ್ಯಾರ್ಥಿನಿಯಾಗಿದ್ದಳು. ಯುವಕನೊಬ್ಬನ ಜೊತೆ ಪ್ರೀತಿ ಮಾಡುತ್ತಿದ್ದಳು ಈ ವಿಚಾರ ಎರಡು ಮನೆಯವರಿಗೂ ತಿಳಿದು ಒಪ್ಪಿಗೆ ಸೂಚಿಸಿದ್ದರು. ರಮ ತಂದೆ ಕಾಲೇಜ್ ಮುಗಿಯುವ ಒಂದು ವರ್ಷದ ಬಳಿಕ ಮದುವೆ ಮಾಡಿಕೊಡುವುದಾಗಿ ತಿಳಿಸಿದ್ದರು. ಆದ್ರೆ ರಮ ಮುಂದಕ್ಕೆ ತಂದೆ ಮದುವೆ ಮಾಡದೆ ಇದ್ರೆ ಎಂದು ಭಯಗೊಂಡ ಇಲಿಪಾಷಣ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಮಾಹಿತಿ ಲಭ್ಯವಾಗಿದೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಎ.30 ರಂದು ಆತ್ಮಹತ್ಯೆ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.

Leave a Reply

You May Have Missed

error: Content is protected !!