ಅಧ್ಯಕ್ಷತೆ ಮತ್ತು ಸಂಸದೀಯ ಕಾರ್ಯವಿಧಾನಗಳ ತರಬೇತಿ CAPP

ಅಧ್ಯಕ್ಷತೆ ಮತ್ತು ಸಂಸದೀಯ ಕಾರ್ಯವಿಧಾನಗಳ ತರಬೇತಿ CAPP

ನೇಸರ ಮಾ.26: ಜೇಸಿಐ ಪುತ್ತೂರು, ವಿಟ್ಲ ಮತ್ತು ಉಪ್ಪಿನಂಗಡಿ ಘಟಕದ ನೇತೃತ್ವದಲ್ಲಿ ಜೇಸಿ ಸದಸ್ಯರಿಗೆ CAPP ತರಬೇತಿ ಕಾರ್ಯಕ್ರಮ ಪುತ್ತೂರು ಮುಳಿಯ ಕಮ್ಯುನಿಟಿ ಹಾಲಿನಲ್ಲಿ ನಡೆಯಿತು.
ರಾಷ್ಟ್ರೀಯ ತರಬೇತಿದಾರರಾದ ಜೇಸಿ.ಡಾ.ರಾಘವೇಂದ್ರ ಹೊಳ್ಳ ತರಬೇತಿ ನಡೆಸಿಕೊಟ್ಟರು. ಪುತ್ತೂರು ಘಟಕ ಅಧ್ಯಕ್ಷರಾದ ಜೇಸಿ ಶಶಿರಾಜ್ ರೈ, ವಿಟ್ಲ ಅಧ್ಯಕ್ಷರಾದ ಜೇಸಿ ಚಂದ್ರಹಾಸ ಉಪ್ಪಿನಂಗಡಿ ಅಧ್ಯಕ್ಷರಾದ ಜೇಸಿ ಮೋಹನ್ ಚಂದ್ರ ತೋಟದ ಮನೆ, ಕಾರ್ಯದರ್ಶಿ ಜೇಸಿ.ಶ್ರೀಮತಿ ಲವಿನಾ ಪಿಂಟೊ ಪೂರ್ವಾಧಕ್ಷರಾದ ಜೇಸಿ ಪ್ರಶಾಂತ್ ಕುಮಾರ್ ರೈ, ಜೇಸಿ ವೇಣುಗೋಪಾಲ್, ಕೋಶಾಧಿಕಾರಿ ಜೇಸಿ ಸುರೇಶ್, ಸದಸ್ಯರಾದ ಜೇಸಿ ದಿವಾಕರ ಶಾಂತಿನಗರ, ಜೇಸಿ ಮಹೇಶ್ ಖಂಡಿಗ ಮತ್ತು ಜೇಸಿ ಪುನೀತ್ ಮಂಜಿಪಲ್ಲ, ಜೇಸಿ ಋತ್ವಿಕಾ, ಜೇಸಿ ಚೇತನ್, ಜೇಸಿ ರಘು ಶೆಟ್ಟಿ, ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು ಭಾಗವಹಿಸಿದರು.

ವೀಕ್ಷಿಸಿ Subscribers ಮಾಡಿ

Leave a Reply

You May Have Missed

error: Content is protected !!