ಅರಸಿನಮಕ್ಕಿ: ಆರೆಸ್ಸೆಸ್ ಹಿರಿಯ ಸ್ವಯಂಸೇವಕ ಸೋಮಯ್ಯ ಆಚಾರ‍್ಯ ನಿಧನ

ಅರಸಿನಮಕ್ಕಿ: ಆರೆಸ್ಸೆಸ್ ಹಿರಿಯ ಸ್ವಯಂಸೇವಕ ಸೋಮಯ್ಯ ಆಚಾರ‍್ಯ ನಿಧನ

ನೇಸರ ಮಾ.26: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಸ್ವಯಂಸೇವಕರು, ಹತ್ಯಡ್ಕ ಗ್ರಾಮದ ಬಿಜೆಪಿಯ ಕಟ್ಟಾಳು ನಾವಳೆ ಸೋಮಯ್ಯ ಆಚಾರ‍್ಯರವರು ಶುಕ್ರವಾರ ರಾತ್ರಿ ನಿಧನ ಹೊಂದಿದರು.
ಇವರು ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಧರ್ಮಸ್ಥಳದಲ್ಲಿ ಹಲವಾರು ವರ್ಷಗಳಿಂದ ದುರ್ಗಾ ಆಟೋ ವರ್ಕ್ಸ್ ನಡೆಸುತ್ತಿದ್ದರು. ಸಮಾಜಸೇವಕರಾಗಿ ಸ್ಥಳೀಯ ಧಾರ್ಮಿಕ – ಸಾಮಾಜಿಕ ಕಾರ್ಯಕ್ರಮಗಳಲ್ಲಿ, ಸಂಘ – ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿದ್ದರು. ಅಜಾತಶತ್ರುವಾಗಿದ್ದು ಎಲ್ಲರೊಂದಿಗೆ ಉತ್ತಮ ಒಡನಾಟವನ್ನು ಹೊಂದಿದ್ದರು.

ವೀಕ್ಷಿಸಿ Subscribers ಮಾಡಿ

Leave a Reply

You May Have Missed

error: Content is protected !!