ರಾಷ್ಟ್ರಮಟ್ಟದ ಯೋಗ ಪಟು ಆರಾಧ್ಯ.ಎ.ರೈ ಇವರಿಗೆ ನ್ಯಾಷನಲ್ ಯೋಗಾಸನ ಸ್ಟಾರ್ ಪ್ಲೇಯರ್ ಅವಾರ್ಡ್

ರಾಷ್ಟ್ರಮಟ್ಟದ ಯೋಗ ಪಟು ಆರಾಧ್ಯ.ಎ.ರೈ ಇವರಿಗೆ ನ್ಯಾಷನಲ್ ಯೋಗಾಸನ ಸ್ಟಾರ್ ಪ್ಲೇಯರ್ ಅವಾರ್ಡ್

ನೇಸರ ಮಾ.26: ಯೋಗಾಸನ ಸ್ಪೋರ್ಟ್ಸ್ ಫೆಡರೇಶನ್ ಇಂಡಿಯಾ ಅವರು ನಡೆಸಿದ ನ್ಯಾಷನಲ್ ಯೋಗಾಸನ ಸ್ಪೋರ್ಟ್ಸ್ ಚಾಂಪಿಯನ್ ಶಿಪ್ ನಲ್ಲಿ 8 ವರ್ಷ ವಯೋಮಿತಿಯೊಳಗಿನ ಬಾಲಕಿಯರ ವಿಭಾಗದಲ್ಲಿ ರಾಷ್ಟ್ರಮಟ್ಟದ ಯೋಗ ಪಟು ಆರಾಧ್ಯ.ಎ.ರೈ ಇವರು ಪ್ರಥಮ ಸ್ಥಾನ ಗಳಿಸಿ ನ್ಯಾಷನಲ್ ಯೋಗಾಸನ ಸ್ಟಾರ್ ಪ್ಲೇಯರ್ ಅವಾರ್ಡ್ ಪಡೆದುಕೊಂಡಿದ್ದಾರೆ. ಇವರು ನೆಲ್ಯಾಡಿ ಜ್ಞಾನೋದಯ ಬೆಥನಿ ಆಂಗ್ಲ ಮಾಧ್ಯಮ ಶಾಲೆಯ 2ನೇ ತರಗತಿ ವಿದ್ಯಾರ್ಥಿನಿ. ಶರತ್ ಮರ್ಗಿಲಡ್ಕ ಇವರಲ್ಲಿ ತರಬೇತಿ ಪಡೆಯುತ್ತಿದ್ದಾರೆ. ತೊಟ್ಲ ನಿವಾಸಿ ಅವಿನಾಶ್ ರೈ ಹಾಗೂ ಸಂಧ್ಯಾ ರೈ ದಂಪತಿ ಪುತ್ರಿ.

ವೀಕ್ಷಿಸಿ Subscribers ಮಾಡಿ

Leave a Reply

You May Have Missed

error: Content is protected !!