ಜೇಸಿಐ ಮಂಗಳೂರು ಡೈಮಂಡ್ “ಸೆಲ್ಯೂಟ್ ದಿ ಸೈಲೆಂಟ್ ವರ್ಕರ್” ಗೆ ಸನ್ಮಾನ

ಜೇಸಿಐ ಮಂಗಳೂರು ಡೈಮಂಡ್ “ಸೆಲ್ಯೂಟ್ ದಿ ಸೈಲೆಂಟ್ ವರ್ಕರ್” ಗೆ ಸನ್ಮಾನ

ನೇಸರ ಮಾ.28:ಜೇಸಿಐ ಮಂಗಳೂರು ಡೈಮಂಡ್ ವತಿಯಿಂದ ಸೆಲ್ಯೂಟ್ ದಿ ಸೈಲೆಂಟ್ ವರ್ಕರ್ ಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ ನ ಅಧ್ಯಕ್ಷರಾದ JFM. ಗೀತಾ ಶೇಟ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಲಯ ಉಪಾಧ್ಯಕ್ಷರಾದ JFM. ದೀಪಕ್ ಗಂಗೂಲಿ, ವಲಯ ಸಂಯೋಜಕರಾದ ಜೇಸಿ. ಸಂತೋಷ್ ಜೈನ್, ಜೆಜೆಸಿ ದಿವ್ಯ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂಗವಾಗಿ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮನೋಜ್, ರೇಣುಕಾ, ತೇಜಸ್ವಿನಿ, ಮೋಹಿನಿ ಗಾಯತ್ರಿ ಶೆಟ್ಟಿ ಹಾಗೂ ಸಾಂಸ್ಕೃತಿಕ ಕಲಾಕ್ಷೇತ್ರದಲ್ಲಿ ಶ್ರಮಿಸಿದ ಕಲಾವಿದೆ ಶ್ರೀಮತಿ ಸುಖಲತಾ ಶೆಟ್ಟಿ ಪಚ್ಚನಾಡಿ ಇವರುಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜೇಸಿಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಅನಿತಾ ಶೆಟ್ಟಿ ಜೇಸಿವಾಣಿ ವಾಚಿಸಿದರು. ಜೇಸಿ. ವಿಜಯ ಶೇಟ್ ಸ್ವಾಗತಿಸಿದರು. ಕಾರ್ಯದರ್ಶಿ ಜೇಸಿ ಗಾಯತ್ರಿ ಶ್ರೀನಿವಾಸ್ ವಂದಿಸಿದರು.

ವೀಕ್ಷಿಸಿ SUBSCRIBERS ಮಾಡಿ

Leave a Reply

You May Have Missed

error: Content is protected !!