ಲಾವತ್ತಡ್ಕ: ಕೃಷಿ ತೋಟದೊಳಗೆ ಕಾಡಾನೆ ದಾಳಿ, ಕೃಷಿ ಹಾನಿ

ಲಾವತ್ತಡ್ಕ: ಕೃಷಿ ತೋಟದೊಳಗೆ ಕಾಡಾನೆ ದಾಳಿ, ಕೃಷಿ ಹಾನಿ

ನೇಸರ ಎ.11: ನೂಜಿಬಾಳ್ತಿಲ ಗ್ರಾಮದ ಲಾವತ್ತಡ್ಕ ಎಂಬಲ್ಲಿ ಏ.11 ರಂದು ಬೆಳಗ್ಗೆ 3 ಗಂಟೆಗೆ ಕಾಡಾನೆಯೊಂದು ತೋಟದೊಳಗೆ ದಾಳಿ ನಡೆಸಿ ಕೃಷಿ ಹಾನಿ ಉಂಟು ಮಾಡಿರುವ ಬಗ್ಗೆ ವರದಿಯಾಗಿದೆ.

ಲಾವತ್ತಡ್ಕ ನಿವಾಸಿ ವರ್ಗೀಸ್ ತೋಮಸ್ ಎಂಬವರ ತೋಟದೊಳಗೆ ನುಗ್ಗಿರುವ ಆನೆ ತೆಂಗು, ಬಾಳೆ ಗಿಡಗಳನ್ನು ಕೆಡವಿ ಹಾಕಿದ್ದು, ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿರುವುದಾಗಿ ಅವರು ತಿಳಿಸಿದ್ದಾರೆ.
ಈ ಭಾಗದಲ್ಲಿ ಆನೆ ಸದಾ ಸಂಚರಿಸುತ್ತಿದ್ದು, ಆನೆ ದಾಳಿ ನಡೆಯುತ್ತಲೇ ಇರುತ್ತದೆ, ಇದರಿಂದಾಗಿ ಕೃಷಿಯನ್ನು ನಂಬಿ ಜೀವನ ನಡೆಸುತ್ತಿರುವ ಬಡ ಕುಟುಂಬಗಳಿಗೆ ಆರ್ಥಿಕವಾಗಿ ಅಪಾರ ನಷ್ಟ ಸಂಭವಿಸುತ್ತಲೇ ಇದೆ. ಸಂಬಂಧಪಟ್ಟ ಅರಣ್ಯ ಇಲಾಖೆಯವರು ಗಮನಹರಿಸಿ ಶಾಶ್ವತ ಪರಿಹಾರವನ್ನು ಮಾಡುವಲ್ಲಿ ಕಾಳಜಿ ವಹಿಸಬೇಕೆಂದು ರೈತರು ಆಗ್ರಹಿಸಿದ್ದಾರೆ
.

 

—ಜಾಹೀರಾತು—

Leave a Reply

You May Have Missed

error: Content is protected !!