ಪಂಜ: ಈಜು ತರಬೇತಿ ಶಿಬಿರ

ಪಂಜ: ಈಜು ತರಬೇತಿ ಶಿಬಿರ

ನೇಸರ ಎ.11: ಜೇಸಿಐ ಪಂಜ ಪಂಚಶ್ರೀ ಮತ್ತು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಪಂಜ ಇದರ ಜಂಟಿ ಆಶ್ರಯದಲ್ಲಿ ಒಂದು ವಾರ ನಡೆಯಲಿರುವ ಈಜು ತರಬೇತಿ ಶಿಬಿರ ಎ.11ರಂದು ಉದ್ಘಾಟನೆಗೊಂಡಿತು.

ಶಿಬಿರದ ಉದ್ಘಾಟನೆಯನ್ನು ಜೇಸಿಐ ಭಾರತದ ಪೂರ್ವ ರಾಷ್ಟ್ರೀಯ ನಿರ್ದೇಶಕರು ಆಗಿರುವ ಜೇಸಿ JFD.ಚಂದ್ರಶೇಖರ್ ನಾಯರ್ ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ ಪಂಜ ಪಂಚಶ್ರೀ ಯ ಘಟಕಾಧ್ಯಕ್ಷರು ಆಗಿರುವ JFM.ಶಿವಪ್ರಸಾದ್ ಹಾಲೆಮಜಲು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಪಂಜ ಇದರ ಅಧ್ಯಕ್ಷರು ಆಗಿರುವ ಬಿ.ಕೆ ಮಾಧವ ಗೌಡ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಹಾಯಕ ಆಯುಕ್ತರು ಆಗಿರುವ ದೇವಿಪ್ರಸಾದ್ ಜಾಕೆ ಭಾಗವಹಿಸಿದ್ದರು ಹಾಗೂ ವೇದಿಕೆಯಲ್ಲಿ ಸ್ಕೌಟ್ ಗೈಡ್ಸ್ ಸ್ಥಳೀಯ ಸಂಸ್ಥೆ ಪಂಜದ ಕಾರ್ಯದರ್ಶಿ ಉದಯಕುಮಾರ್ ರೈ, ಮುಖ್ಯ ಈಜು ತರಬೇತುದಾರ ಯಶವಂತ ಬಿ, ಕಾರ್ಯಕ್ರಮ ನಿರ್ದೇಶಕ ಜೇಸಿ.ಸುದರ್ಶನ ಪಟ್ಟಾಜೆ ಉಪಸ್ಥಿತರಿದ್ದರು. ಘಟಕದ ಪೂರ್ವ ಅಧ್ಯಕ್ಷ ಜೇಸಿ.ನಾಗಮಣಿ ಕೆದಿಲ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ಜೇಸಿ ಪ್ರವೀಣ್ ಕಾಯರ ಜೇಸಿವಾಣಿ ನುಡಿದರು. ಜೇಸಿ.ಪ್ರಸನ್ನ ವೈ ಟಿ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಘಟಕದ ಜೊತೆ ಕಾರ್ಯದರ್ಶಿ ಜೇಸಿ.ವಾಚಣ್ಣ ಕೆರೆಮೂಲೆ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ಘಟಕದ ಪೂರ್ವ ಅಧ್ಯಕ್ಷರುಗಳು ಹಾಗೂ ಎಲ್ಲಾ ಸದಸ್ಯರುಗಳು ಭಾಗವಹಿಸಿದ್ದರು. ಸುಮಾರು 75 ಶಿಬಿರಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು.

ವೀಕ್ಷಿಸಿ SUBSCRIBERS ಮಾಡಿ

 

—ಜಾಹೀರಾತು—

Leave a Reply

You May Have Missed

error: Content is protected !!