ಚಾರ್ಮಾಡಿ: ಮತ್ತೆ ಆನೆ ದಾಳಿ, ಕೃಷಿ ಹಾನಿ

ಚಾರ್ಮಾಡಿ: ಮತ್ತೆ ಆನೆ ದಾಳಿ, ಕೃಷಿ ಹಾನಿ

ನೇಸರ ಜು.01: ಚಾರ್ಮಾಡಿ ಗ್ರಾಮದ ಮಠದ ಮಜಲು ಅನಂತರಾವ್ ಹಾಗೂ ಪ್ರಕಾಶ್ ನಾರಾಯಣರಾವ್ ಅವರ ಕೃಷಿ ತೋಟಗಳಿಗೆ ಕಾಡಾನೆಗಳ ಗುಂಪು ಬುಧವಾರ ರಾತ್ರಿ ಮತ್ತೆ ದಾಳಿ ನಡೆಸಿದ್ದು, 67 ಅಡಕೆ ಮರ ಹಾಗೂ 25ಕ್ಕಿಂತ ಅಧಿಕ ಬಾಳೆ ಗಿಡಗಳನ್ನು ನಾಶಗೈದಿವೆ.
ಸೋಮವಾರ ರಾತ್ರಿಯು ಇವರ ತೋಟಗಳಿಗೆ ದಾಳಿ ನಡೆಸಿದ್ದ ಕಾಡಾನೆಗಳು 100ಕ್ಕಿಂತ ಅಧಿಕ ಅಡಕೆ, ತೆಂಗು ಹಾಗೂ ಬಾಳೆ ಕೃಷಿಗೆ ಹಾನಿ ಉಂಟು ಮಾಡಿದ್ದವು.

ಗುಂಪಿನಲ್ಲಿ ಸುಮಾರು 10 ಕಾಡಾನೆಗಳು ಇರುವ ಸಾಧ್ಯತೆ ಇದ್ದು, ಕಳೆದ ಕೆಲವು ದಿನಗಳಿಂದ ಇದೇ ಪರಿಸರದಲ್ಲಿ ಬೀಡುಬಿಟ್ಟಿರುವ ಶಂಕೆ ವ್ಯಕ್ತವಾಗಿದೆ.

ವೀಕ್ಷಿಸಿ SUBSCRIBERS ಮಾಡಿ🙏🏻

Leave a Reply

You May Have Missed

error: Content is protected !!