ಕರೆಂಟ್ ಶಾಕ್ ಹೊಡೆದು ವೃತಪಟ್ಟ ಬಾಲಕ

ಕರೆಂಟ್ ಶಾಕ್ ಹೊಡೆದು ವೃತಪಟ್ಟ ಬಾಲಕ

ನೇಸರ ಜು.02: ಐವರ್ನಾಡಿನ ಕೈಯಲ್ ತಡ್ಕ ಎಂಬಲ್ಲಿಯ ಆದಂ ವಿ.ಕೆ., ಎಂಬವರ ಮಗಳು ಅಪ್ಸರ ಹಾಗೂ ಕೆದಂಬಾಡಿ ಗ್ರಾಮದ ಸನ್ಯಾಸಿ ಗುಡ್ಡೆ ನಿವಾಸಿ ಆಲಿಯವರ ಪುತ್ರ ಮಹಮ್ಮದ್ ಆದಿಲ್(ವ.6) ಮೃತಪಟ್ಟ ದುರ್ದೈವಿ.

ಆದಂ ವಿ.ಕೆ., ಎಂಬವರ ಮನೆಯಲ್ಲಿ ಮಹಮ್ಮದ್ ಆದಿಲ್ ಹಳೆಯದಾದ ಫ್ರಿಡ್ಜ್ ನ್ನು ಮುಟ್ಟಿದಾಗ ಕರೆಂಟ್ ಶಾಕ್ ಹೊಡೆದು ನೆಲಕ್ಕೆ ಬಿದ್ದು ಮಾತನಾಡದ ಸ್ಥಿತಿಯಲ್ಲಿದ್ದವನನ್ನು ಚಿಕಿತ್ಸೆಗಾಗಿ ಸುಳ್ಯ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದು, ಬಾಲಕನ ಎಡ ಕೈಯಲ್ಲಿ ಅಲ್ಲಲ್ಲಿ ಚರ್ಮ ಕಿತ್ತು ಹೋಗಿರುವುದು ಕಂಡುಬರುತ್ತದೆ. ಘಟನಾ ಸ್ಥಳಕ್ಕೆ ಮೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Leave a Reply

You May Have Missed

error: Content is protected !!