ರಿಕ್ಷಾ ಹಾಗೂ ಕಾರು ಮುಖಾಮುಖಿ ಡಿಕ್ಕಿ; ನಾಲ್ವರಿಗೆ ಗಾಯ

ರಿಕ್ಷಾ ಹಾಗೂ ಕಾರು ಮುಖಾಮುಖಿ ಡಿಕ್ಕಿ; ನಾಲ್ವರಿಗೆ ಗಾಯ

ನೇಸರ ಜು.03: ರಿಕ್ಷಾ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾಗಿ ನಾಲ್ವರು ಗಾಯಗೊಂಡ ಘಟನೆ ಭಾನುವಾರ ಬೆಳ್ತಂಗಡಿ ತಾಲೂಕಿನ ನಿಡ್ಲೆ ಸಮೀಪದ ಸಂತೋಷ ನಗರದಲ್ಲಿ ಸಂಭವಿಸಿದೆ.
ಕಡಬದಿಂದ ಧರ್ಮಸ್ಥಳಕ್ಕೆ ಬರುತ್ತಿದ್ದ ರಿಕ್ಷಾಕ್ಕೆ ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ಹೋಗುವ ಕಾರು ಡಿಕ್ಕಿಯಾಗಿದ್ದು ಪ್ರಯಾಣಿಕರಾದ ಸಾನ್ವಿ(12), ದಿನೇಶ್(35), ಚಂದ್ರಶೇಖರ್ (45), ಶಕುಂತಲಾ(63) ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ತಕ್ಷಣವೇ ಕೊಕ್ಕಡದ 108 ಆಂಬುಲೆನ್ಸ್ ನ ಡ್ರೈವರ್ ಗಿರೀಶ್ ಮತ್ತು ನರ್ಸ್ ಶುಭಲಕ್ಷ್ಮಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಆಸ್ಪತ್ರೆಗೆ ದಾಖಲಿಸಿದ್ದಾರೆ.

Leave a Reply

You May Have Missed

error: Content is protected !!