ನೆಲ್ಯಾಡಿ: ಗುಡ್ಡ ಕುಸಿತ; ಮನೆ ಕುಸಿದು ಬೀಳುವ ಭೀತಿ; ಕುಟುಂಬ ತಾತ್ಕಾಲಿಕ ಸ್ಥಳಾಂತರ

ನೆಲ್ಯಾಡಿ: ಗುಡ್ಡ ಕುಸಿತ; ಮನೆ ಕುಸಿದು ಬೀಳುವ ಭೀತಿ; ಕುಟುಂಬ ತಾತ್ಕಾಲಿಕ ಸ್ಥಳಾಂತರ

ನೇಸರ ಜು.11: ಜಿಲ್ಲೆಯಾದ್ಯಾಂತ ಎಡೆಬಿಡದೆ ಸುರಿಯುತ್ತಿರುವ ಮಳೆ ಅಲ್ಲಲ್ಲಿ ಹಾನಿಯೆಸಗುತ್ತಿದ್ದು ಹಲವರ ಭವಿಷ್ಯಕ್ಕೆ ಮುಳ್ಳಾಗುತ್ತಿದೆ. ನೆಲ್ಯಾಡಿ ಗ್ರಾಮದ ರಾಮನಗರ ಕಲ್ಲೇರಿ ನಿವಾಸಿ ತಿಮ್ಮಪ್ಪ ಗೌಡರದ್ದು 4 ಜನರ ಬಡ ಕುಟುಂಬ, ಇರುವುದೊಂದೇ ಆಸ್ತಿ ವಾಸಕ್ಕೆ ಸಣ್ಣ ಮನೆ. ಕಳೆದ ವಾರದಿಂದ ಸುರಿಯುತ್ತಿರುವ ನಿರಂತರ ಮಳೆಗೆ ಮನೆ ಪಕ್ಕದ ಗುಡ್ಡ ನಿನ್ನೆ ರಾತ್ರಿಯಿಂದ ಕುಸಿಯಲು ಆರಂಭಿಸಿದ್ದು, ಮನೆ ಕುಸಿದು ಬೀಳುವ ಭೀತಿಯಲ್ಲಿದೆ.

ಸ್ಥಳಕ್ಕೆ ಆಗಮಿಸಿದ ನೆಲ್ಯಾಡಿ ಗ್ರಾಮ ಪಂಚಾಯತ್ ಸದಸ್ಯ ರವಿಪ್ರಸಾದ್ ಶೆಟ್ಟಿ ಮತ್ತು ಮುಖಂಡರಾದ ಶಿವಪ್ರಸಾದ್ ಪುತ್ತಿಲ, ಚಂದ್ರಶೇಖರ್ ರೈ, ವಾಸಪ್ಪ ಗೌಡ ಕಲ್ಲೇರಿ, ಶೇಖರ್ ಕಲ್ಲೇರಿ, ಸಂಪತ್ ರಾಮನಗರ ಮೊದಲಾದವರು ಸೇರಿ ಮನೆಯ ಸಾಮಾನು ತೆರವುಗೊಳಿಸಿ ಕುಟುಂಬ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿದರು.

ವೀಕ್ಷಿಸಿ SUBSCRIBERS ಮಾಡಿ🙏🏻

Leave a Reply

You May Have Missed

error: Content is protected !!