ಅನಿರೀಕ್ಷಿತ ಗಾಳಿ ಬಿಸಿ ಮನೆಯ ಶೀಟುಗಳು ಹಾರಿ ಅನಾಹುತ

ಅನಿರೀಕ್ಷಿತ ಗಾಳಿ ಬಿಸಿ ಮನೆಯ ಶೀಟುಗಳು ಹಾರಿ ಅನಾಹುತ

ನೇಸರ ಜು.14: ನೆಲ್ಯಾಡಿ ಪ್ರದೇಶದಲ್ಲಿ ಗುರುವಾರ ಮಧ್ಯಾಹ್ನ ಬೀಸಿದ ಬಿರುಗಾಳಿಯಿಂದಾಗಿ ಇಲ್ಲಿನ ಸಮೀಪದ ಕೊಲ್ಯೊಟ್ಟು ನಿವಾಸಿ ಬೇಬಿ ಪೂಜಾರಿ ಅವರ ಮನೆಯ 20ಕ್ಕೂ ಹೆಚ್ಚು ಶೀಟುಗಳು ಹಾರಿ ಹೋಗಿದೆ.

ಸ್ಥಳೀಯ ಪಂಚಾಯತ್ ಸದಸ್ಯರಾದ ಜಯಾನಂದ ಬಂಟ್ರಿಯಾಲ್ ಸ್ವತಃ ತಾವೇ, ಊರಿನವರ ಸಹಕಾರದೊಂದಿಗೆ ತಾತ್ಕಾಲಿಕವಾಗಿ ಶೀಟ್ ಗಳನ್ನು ಹಾಕಿಕೊಟ್ಟರು.
ಗುರುವಾರ ಮಧ್ಯಾಹ್ನ ನೆಲ್ಯಾಡಿ, ಕೊಕ್ಕಡ, ಕೌಕ್ರಾಡಿ ಕಡೆಗಳಲ್ಲಿ ಅನಿರೀಕ್ಷಿತ ಗಾಳಿ ಬಿಸಿ ಕೆಲವು ಕಡೆ ಅನಾಹುತಗಳು ಸಂಭವಿಸಿದೆ.

Leave a Reply

You May Have Missed

error: Content is protected !!