ಕೊಕ್ಕಡ- ಬೆನಕ- ಪಾಲಾಲೆ ಭಾಗದ ಸಾರ್ವಜನಿಕರ ಬಹುದಿನದ ಬೇಡಿಕೆ ಈಡೇರಿಸಿದ ಕೊಕ್ಕಡ ಪಂಚಾಯತ್

ಕೊಕ್ಕಡ- ಬೆನಕ- ಪಾಲಾಲೆ ಭಾಗದ ಸಾರ್ವಜನಿಕರ ಬಹುದಿನದ ಬೇಡಿಕೆ ಈಡೇರಿಸಿದ ಕೊಕ್ಕಡ ಪಂಚಾಯತ್

ನೇಸರ ಜು.19: ಕೊಕ್ಕಡ- ಬೆನಕ – ಪಾಲಾಲೆ ಸಂಪರ್ಕಿಸುವ ಸಾರ್ವಜನಿಕ ರಸ್ತೆಯು ಬೆಳ್ತಂಗಡಿ ತಾಲೂಕು ಮತ್ತು ಕಡಬ ತಾಲೂಕಿನ ಗಡಿ ಭಾಗದ ರಸ್ತೆ ಇದಾಗಿತ್ತು. ಆದುದರಿಂದ ಈ ರಸ್ತೆಯ ಯಾವುದೇ ಕೆಲಸ ಕಾರ್ಯಗಳು ನಡೆಯದೆ ಕಚ್ಚಾ ರಸ್ತೆಯಾಗಿ ಮಾರ್ಪಟ್ಟಿತ್ತು. ರಸ್ತೆಯ ಮೇಲೆ ನೀರು ಹರಿದು ಸಂಚಾರಕ್ಕೆ ಯೋಗ್ಯವಾಗಿರಲಿಲ್ಲ.

ಈ ಬಗ್ಗೆ ಸಾರ್ವಜನಿಕರ ಮನವಿಯ ಮೇರೆಗೆ ಕೊಕ್ಕಡ ಪಂಚಾಯತ್ ಅಧ್ಯಕ್ಷರಾದ ಯೋಗೀಶ ಆಲಂಬಿಲ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದೀಪಕ್ ರಾಜ್, ವಾರ್ಡಿನ ಸದಸ್ಯ ಪುರುಷೋತ್ತಮ ರವರು ತಕ್ಷಣ ಸ್ಪಂದಿಸಿ, ಮೋರಿಯನ್ನು ಅಳವಡಿಸಿ ರಸ್ತೆಯನ್ನು ನೇರವಾಗಿ ನಿರ್ಮಿಸಿದರು.

ತಕ್ಷಣ ಸ್ಪಂದಿಸಿ ಆ ಭಾಗದ ಜನರ ಬಹುದಿನದ ಬೇಡಿಕೆಯನ್ನು ಈಡೇರಿಸಿದ ಅಧಿಕಾರಿ ವರ್ಗದವರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

Previous post

ಕೆ ಎಸ್ ಎಸ್ ಮಹಾವಿದ್ಯಾಲಯ ಸುಬ್ರಹ್ಮಣ್ಯದಲ್ಲಿ ಎಂ.ಓ.ಯು ಗೆ ಸಂಬಂಧಿಸಿದ ಚಟುವಟಿಕೆ ಹಾಗೂ ಸ್ಪರ್ಧಾ ಕಾರ್ಯಕ್ರಮ

Next post

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಮಣ್ಯ ಇದರ ವಾಣಿಜ್ಯ ಹಾಗೂ ಉದ್ಯಮಾಡಳಿತ ವತಿಯಿಂದ ನಾಟಿ ಕಾರ್ಯಕ್ರಮ

Leave a Reply

You May Have Missed

error: Content is protected !!