ಕುಕ್ಕೆ ಶ್ರೀ ಸುಬ್ರಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ ➽ ಪ್ರೇರಣ 2022 ಇಂಟರ್ ಕ್ಲಾಸ್ ವಾಣಿಜ್ಯ ಉತ್ಸವ

ಕುಕ್ಕೆ ಶ್ರೀ ಸುಬ್ರಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ ➽ ಪ್ರೇರಣ 2022 ಇಂಟರ್ ಕ್ಲಾಸ್ ವಾಣಿಜ್ಯ ಉತ್ಸವ

ನೇಸರ ಜು.20: ಕುಕ್ಕೆ ಸುಬ್ರಮಣ್ಯೇಶ್ವರ ಕಾಲೇಜು ಇದರ ವಾಣಿಜ್ಯ ಮತ್ತು ಉದ್ಯಮಾಡಳಿತ ಘಟಕದ ಪ್ರೇರಣ 2022 ಇಂಟರ್ ಕ್ಲಾಸ್ ವಾಣಿಜ್ಯ ಉತ್ಸವವನ್ನು ಅಂತಿಮ ಪದವಿಯ ಬಿ.ಕಾಂ ಮತ್ತು ಬಿಬಿಎ ವಿದ್ಯಾರ್ಥಿಗಳು ಆಯೋಜಿಸಿದರು.
ನಿವೃತ್ತ ಅರ್ಥಶಾಸ್ತ್ರ ಉಪನ್ಯಾಸಕರಾದ ತಿಲಕ್ ಇವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಹಾಗೂ ಸಮರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕನ್ನಡ ಚಿತ್ರರಂಗದ ದಿಗ್ಗಜ ಹಾಸ್ಯನಟ ಟೆನ್ನಿಸ್ ಕೃಷ್ಣ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ದಿನೇಶ್ ಪಿ.ಟಿ., ವಾಣಿಜ್ಯ ಮತ್ತು ಉದ್ಯಮಾಡಳಿತ ಘಟಕದ ಮುಖ್ಯಸ್ಥರಾದ ಶ್ರೀಮತಿ ಲತಾ ಬಿ.ಟಿ. ಮತ್ತು ಪ್ರೇರಣಾ 2022 ರ ವಿದ್ಯಾರ್ಥಿ ಸಂಯೋಜಕರಾದ ಅನ್ವಿತ್ ಕೆ.ವಿ. ಇವರು ಉಪಸ್ಥಿತರಿದ್ದರು.
ಈ ಪ್ರಯುಕ್ತ ತರಗತಿವಾರು ಹತ್ತು ಸ್ಪರ್ಧೆ ಏರ್ಪಡಿಸಲಾಗಿತ್ತು ಹಾಗೂ ದ್ವಿತೀಯ ಕಲಾ ವಿಭಾಗ ಚಾಂಪಿಯನ್ ಆಗಿ ಹೊರಹೊಮ್ಮಿದರು.
ಶ್ರೀ ಶಬರಿ ಚೆಂಡೆ ಕಾವೂರು ಇವರ ಚೆಂಡೆ, ಕೊಳಲು, ವಯೊಲಿನ್ ವಾದನ ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿತ್ತು.
ಕಾಲೇಜಿನ ಉಪನ್ಯಾಸಕ ವೃಂದ, ಸಿಬ್ಬಂದಿ ವೃಂದ ಮತ್ತು ಕಾಲೇಜಿನ ಎಲ್ಲಾ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

Previous post

ಜೇಸಿಐ ಪಂಜ ಪಂಚಶ್ರೀ ವತಿಯಿಂದ ಪ್ರೋಟೀನ್ ಪೌಡರ್ ವಿತರಣೆ

Next post

ಸರಸ್ವತಿ ವಿದ್ಯಾಲಯ ವಿದ್ಯಾನಗರ ಕಡಬದಲ್ಲಿ ➤ “ವೈಜ್ಞಾನಿಕ ಪ್ರಾಜೆಕ್ಟ್ : ಒಂದು ಒಳನೋಟ, ವಿಜ್ಞಾನದೆಡೆಗೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು” ಕಾರ್ಯಾಗಾರ

Leave a Reply

You May Have Missed

error: Content is protected !!