ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ವಿದ್ಯಾರ್ಥಿಗಳು ಆಶ್ರಮ ಶಾಲೆಗೆ ಭೇಟಿ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ವಿದ್ಯಾರ್ಥಿಗಳು ಆಶ್ರಮ ಶಾಲೆಗೆ ಭೇಟಿ

ನೇಸರ ಜು.22: ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ ಇಲ್ಲಿನ ರೋವರ್ಸ್ ಮತ್ತು ರೇಂಜರ್ಸ್ ಘಟಕದ ವಿದ್ಯಾರ್ಥಿಗಳು ದಿನಾಂಕ 20-07-2022 ಬುಧವಾರ ದಂದು ಸುಬ್ರಹ್ಮಣ್ಯ ಸಮೀಪದ ಆಶ್ರಮ ಶಾಲೆಗೆ ಭೇಟಿ ನೀಡಿ ಅಲ್ಲಿನ ಪರಿಸರವನ್ನು ಸ್ವಚ್ಛಗೊಳಿಸಿ ಎಲ್ಲರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ. ನಂತರ ಅಲ್ಲಿನ ಮಕ್ಕಳಿಗೆ ಒಂದಷ್ಟು ಆಟವನ್ನು ಆಡಿಸಿ ಖುಷಿ ಪಡಿಸಿದರು. ಜೊತೆಗೆ ಕೆ.ಎಸ್.ಎಸ್ ಮಹಾವಿದ್ಯಾಲಯದ ರೋವರ್ಸ್ ಸ್ಕೌಟ್ ಲೀಡರ್ ಮನೋಹರ ವಿಜೇತರಿಗೆ ಬಹುಮಾನವನ್ನು ವಿತರಿಸಿದರು ಹಾಗೂ ಆಟದಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೂ ಕೂಡ ಸಮಾಧಾನಕರ ಬಹುಮಾನ ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ಕೆ,ಎಸ್ ಎಸ್ ಮಹಾವಿದ್ಯಾಲಯದ ರೆಂಜರ್ಸ್ ಲೀಡರ್ ಶ್ರೀಮತಿ ಪ್ರಮೀಳಾ ಎನ್ ಉಪಸ್ಥಿತರಿದ್ದರು. 35 ರೇಂಜರ್ಸ್ ಮತ್ತು 25 ರೋವರ್ಸ್ ವಿದ್ಯಾರ್ಥಿಗಳು ಹಾಜರಿದ್ದರು, ಆಶ್ರಮ ಶಾಲೆಯ ಅಧ್ಯಾಪಕರು ಸಹಕರಿಸಿ, ಕಾರ್ಯಕ್ರಮವನ್ನು ಸಿಹಿ ಹಂಚುವುದರ ಮೂಲಕ ಯಶಸ್ವಿಗೊಳಿಸಲಾಯಿತು.

Leave a Reply

You May Have Missed

error: Content is protected !!