ಜಗಳ ಬಿಡಿಸಲು ಹೋದ ವ್ಯಕ್ತಿಗೆ ತಂಡದಿಂದ ಹಲ್ಲೆ: ಕುಸಿದು ಸಾವು

ಜಗಳ ಬಿಡಿಸಲು ಹೋದ ವ್ಯಕ್ತಿಗೆ ತಂಡದಿಂದ ಹಲ್ಲೆ: ಕುಸಿದು ಸಾವು

ನೇಸರ ಜು.24: ತನ್ನ ತಮ್ಮನ ಮೇಲೆ ಹಲ್ಲೆ ನಡೆಸುತ್ತಿದ್ದವರನ್ನು ವಿಚಾರಿಸಲು ಹೋಗಿ, ಜಗಳ ನಿಲ್ಲಿಸಲು ಯತ್ನಿಸಿದ ವ್ಯಕ್ತಿಯೊಬ್ಬರು ತಾನೇ ಹಲ್ಲೆಗೆ ಒಳಗಾಗಿ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಶಾಂತಿನಗರ ಎಂಬಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಮೃತರನ್ನು ಶಾಂತಿನಗರ ಕುವೆತ್ಯಾರು ನಿವಾಸಿ ಜಾರಪ್ಪ ನಾಯ್ಕ ಎಂದು ಗುರುತಿಸಲಾಗಿದೆ. ಇವರ ಪುತ್ರ ರಾಜಶೇಖರ ನಾಯ್ಕ ಎಂಬವರು ನೀಡಿದ ದೂರಿನ ಮೇರೆಗೆ ಇದೇ ಪರಿಸರದ ನಿವಾಸಿಗಳಾದ ಚಂದ್ರಕಾಂತ ನಾಯ್ಕ, ಮನೋಹರ ಗೌಡ, ಹರಿಪ್ರಸಾದ್ ಪೂಜಾರಿ ಮತ್ತು ದೀಪಕ್ ಶೆಟ್ಟಿ ಎಂಬವರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 304 ಮತ್ತು 34 ಐಪಿಸಿ ಕಲಂ 3(2)(ವಿ-ಎ) ಎಸ್‌ಸಿ ಆಕ್ಟ್-2015ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

You May Have Missed

error: Content is protected !!