ಬಜತ್ತೂರು ಅಯೋಧ್ಯಾನಗರದ ಶಾಲೆಯಲ್ಲಿ ಮಿಯಾವಾಕಿ ಮಾದರಿಯಲ್ಲಿ ಗಿಡ ನೆಡಲಾಯಿತು

ಬಜತ್ತೂರು ಅಯೋಧ್ಯಾನಗರದ ಶಾಲೆಯಲ್ಲಿ ಮಿಯಾವಾಕಿ ಮಾದರಿಯಲ್ಲಿ ಗಿಡ ನೆಡಲಾಯಿತು

ನೇಸರ ಜು.24: ಬಜತ್ತೂರು ಗ್ರಾಮ ಅಯೋಧ್ಯಾನಗರ ದ ಕ ಜಿ ಪಂ ಹಿ ಪ್ರಾ ಶಾಲೆ ಇಲ್ಲಿ ಪವರ್ ಮ್ಯಾನ್ ದುರ್ಗಾ ಸಿಂಗ್ ಇವರ ನೇತೃತ್ವ ಹಾಗೂ ಎಸ್ ಡಿ ಎಂ ಸಿ ಯ ಅಧ್ಯಕ್ಷರಾದ ದಿನೇಶ್ ಇವರ ಸಹಕಾರದೊಂದಿಗೆ ಮಿಯಾವಾಕಿ ಮಾದರಿಯಲ್ಲಿ ಅರಣ್ಯ ಇಲಾಖೆಯವರು ಕೊಡಮಾಡಿದ ಸುಮಾರು 200ಕ್ಕೂ ಹೆಚ್ಚು ಗಿಡ ನೆಡಲಾಯಿತು.

ಶಾಂತಿನಗರ ಗೋಳಿತೊಟ್ಟು ಇಲ್ಲಿನ ಯುವಕರ ತಂಡ ಬಹಳ ಆಸಕ್ತಿಯಿಂದ ಊರನವರನ್ನು, ಶಾಲಾ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಅತ್ಯುತ್ತಮ ರೀತಿಯಲ್ಲಿ ಶಾಲೆಗೊಂದು ಚೊಕ್ಕದಾದ ವನ ನಿರ್ಮಿಸಲು ಶ್ರಮಿಸಿದರು. ಎಸ್ ಡಿ ಎಂ ಸಿ ಯವರು, ಪೋಷಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಂಪೂರ್ಣ ಸಹಕಾರ ನೀಡಿದರು.

Leave a Reply

You May Have Missed

error: Content is protected !!