ಭಾರತೀಯ ಗಡಿ ಭದ್ರತಾ ಪಡೆಯ ಮಹಿಳಾ ಪ್ರತಿನಿಧಿ ರಮ್ಯಾ ಡಿ.ಗೌಡ : ಶ್ರೀ ಸೌತಡ್ಕ ಮಹಾಗಣಪತಿ ದೇವಸ್ಥಾನಕ್ಕೆ ಭೇಟಿ

ಭಾರತೀಯ ಗಡಿ ಭದ್ರತಾ ಪಡೆಯ ಮಹಿಳಾ ಪ್ರತಿನಿಧಿ ರಮ್ಯಾ ಡಿ.ಗೌಡ : ಶ್ರೀ ಸೌತಡ್ಕ ಮಹಾಗಣಪತಿ ದೇವಸ್ಥಾನಕ್ಕೆ ಭೇಟಿ

ನೇಸರ ನ20: ಪುತ್ತೂರಿನ ಇತಿಹಾಸದಲ್ಲಿ ಪ್ರಥಮ ಬಾರಿಗೆ ಮಹಿಳಾ ಪ್ರತಿನಿಧಿಯಾಗಿ ಭಾರತೀಯ ಗಡಿ ಭದ್ರತಾ ಪಡೆಗೆ ಆಯ್ಕೆಯಾಗಿ ಪ್ರಥಮ ತರಬೇತಿಯನ್ನು ಪೂರೈಸಿ ತಾಯ್ನಾಡಿಗೆ ಆಗಮಿಸಿರುವ ಬಲ್ನಾಡಿನ ಕುಮಾರಿ ರಮ್ಯಾ.ಡಿ ಗೌಡ ದೇವಸ್ಯ ನ.20 ರಂದು ಶ್ರೀ ಸೌತಡ್ಕ ಮಹಾಗಣಪತಿ ದೇವರ ದರ್ಶನ ಪಡೆದರು.
ಕ್ಷೇತ್ರದ ಪ್ರಧಾನ ಅರ್ಚಕರಾದ ಶ್ರೀ ಸತ್ಯಪ್ರಿಯ ಕಲ್ಲೂರಾಯರು ದೇವರಲ್ಲಿ ಪ್ರಾರ್ಥಿಸಿ, ಶಾಲು ಹೊದಿಸಿ ಪ್ರಸಾದ ನೀಡಿ ಕ್ಷೇತ್ರದಿಂದ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕುಶಾಲಪ್ಪ ಗೌಡ ಪೂವಾಜೆ, ಪ್ರಭಾಕರ ಗೌಡ ದಂಪತಿಗಳು ಮೂಡುಬೈಲು, ಕೇಶವ ಕೊಲ್ಲಾಜೆಪಳಿಕೆ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಪ್ರಶಾಂತ್ ಪೂವಾಜೆ ಮತ್ತು ಪುರಂದರ ಕಡೀರ ಉಪಸ್ಥಿತರಿದ್ದರು
.

Leave a Reply

You May Have Missed

error: Content is protected !!