ಸಿಎ ಪರೀಕ್ಷೆ: ಉಜಿರೆಯ ಸಫೀಕಾ ಫಾತಿಮಾ ಉತ್ತೀರ್ಣ

ಸಿಎ ಪರೀಕ್ಷೆ: ಉಜಿರೆಯ ಸಫೀಕಾ ಫಾತಿಮಾ ಉತ್ತೀರ್ಣ

ನೇಸರ ಜು.26: ದೇಶದ ಪ್ರಮುಖ ಪರೀಕ್ಷೆಯಲ್ಲಿ ಒಂದಾದ ಸಿಎ ಪರೀಕ್ಷೆಯಲ್ಲಿ ಉಜಿರೆಯ‌ ಯು.ಎ ಶಫೀಕಾ ಫಾತಿಮಾ ಉತ್ತೀರ್ಣರಾಗಿದ್ದಾರೆ.

ಉಜಿರೆ ಅಡಿಮರೆಬೆಟ್ಟು ನಿವಾಸಿಯಾಗಿರುವ ಇವರು ದಿವಂಗತ ಇಸ್ಮಾಯಿಲ್ ಹಾಗೂ ತಹಸೀನ್ ದಂಪತಿಯ ಪುತ್ರಿಯಾಗಿದ್ದಾರೆ. ಸಿ.ಕೆ ಪಹಾದ್ ಅವರ ಪತ್ನಿ.

ಅನುಗ್ರಹ ಆಂಗ್ಲ ಮಾಧ್ಯಮ ಶಾಲೆ ಉಜಿರೆ ಇಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ ಎಸ್‌ಡಿಎಂ ಉಜಿರೆ ಪಿಯುಸಿಯಲ್ಲಿ ತೇರ್ಗಡೆಗೊಂಡು ನಂತರ ಮಂಗಳೂರಿನ ಖ್ಯಾತ ಚಾರ್ಟರ್ಡ್ ಅಕೌಂಟೆಂಟ್ ಶೇಖ್ ಅಬ್ದುಲ್ಲಾ ಅವರ ತರಬೇತಿಯಲ್ಲಿ ಸಿಎ ಪರೀಕ್ಷೆಗೆ ಸಿದ್ಧತೆ ನಡೆಸಿದ್ದರು.

Leave a Reply

You May Have Missed

error: Content is protected !!