ಸುಬ್ರಮಣ್ಯ: ನಾಗರ ಪಂಚಮಿ ದಿನವಾದ ಇಂದು ವಿಶ್ವವಿಖ್ಯಾತ ನಾಗಕ್ಷೇತ್ರ ಕುಕ್ಕೆಯಲ್ಲಿ ಜನರ ಆಗಮನ ವಿರಳ

ಸುಬ್ರಮಣ್ಯ: ನಾಗರ ಪಂಚಮಿ ದಿನವಾದ ಇಂದು ವಿಶ್ವವಿಖ್ಯಾತ ನಾಗಕ್ಷೇತ್ರ ಕುಕ್ಕೆಯಲ್ಲಿ ಜನರ ಆಗಮನ ವಿರಳ

ನೇಸರ ಆ.02: ಕುಕ್ಕೆ ಸುಬ್ರಮಣ್ಯದಲ್ಲಿ ನಾಗರ ಪಂಚಮಿ ದಿನವಾದ ಇಂದು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಬೇಕಿತ್ತು. ಆದರೆ ನಿನ್ನೆ ಆದಿ ಸುಬ್ರಮಣ್ಯದಲ್ಲಿ ಭೂಕುಸಿತದ ಹಿನ್ನಲೆಯಲ್ಲಿ ಉಂಟಾದ ದೊಡ್ಡ ಪ್ರಮಾಣದ ನೆರೆಯಿಂದಾಗಿ ಭಕ್ತರ ಸಂಖ್ಯೆಯಲ್ಲಿ ವಿರಳತೆ ಕಂಡುಬಂದಿದೆ.
ನಿನ್ನೆ ಆದಿಸುಬ್ರಮಣ್ಯದಲ್ಲಿ ಮರಳು ಕೆಸರು ಮಿಶ್ರಿತ ನೆರೆನೀರು ನುಗ್ಗಿ ದೊಡ್ಡ ಆವಾಂತರ ಸೃಷ್ಟಿಯಾಗಿತ್ತು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಭಕ್ತರು ದೇವಸ್ಥಾನಕ್ಕೆ ಆಗಮಿಸಿದಂತೆ ಮನವಿ ಮಾಡಿದ್ದರು.
ರಾತ್ರಿಯಿಡೀ ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ಅಧಿಕಾರಿಗಳು, ಸಿಬ್ಬಂದಿಗಳ ನೇತೃತ್ವದಲ್ಲಿ ಸ್ವಚ್ಛತೆ ಕಾರ್ಯ ಮಾಡಿ ಭಕ್ತರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೂ ಇಂದು ಕುಕ್ಕೆ ಸುಬ್ರಮಣ್ಯದಲ್ಲಿ ಭಕ್ತರ ಸಂಖ್ಯೆ ವಿರಳವಾಗಿದೆ.

Leave a Reply

You May Have Missed

error: Content is protected !!