ಉಜಿರೆ: ಸಂಸ್ಕೃತ ಸಂಘದ ಪದ ಪ್ರದಾನ

ಉಜಿರೆ: ಸಂಸ್ಕೃತ ಸಂಘದ ಪದ ಪ್ರದಾನ

ನೇಸರ ಆ.03: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಸಂಘ ಹಾಗೂ ಸಂಸ್ಕೃತ ಅಂತರಾಧ್ಯಯನ ವೃತ್ತಮ್ ಗಳ ಪದ ಪ್ರದಾನ ಕಾರ್ಯಕ್ರಮ ಜರಗಿತು.
ಕಾಲೇಜಿನ ಪ್ರಿನ್ಸಿಪಾಲ್ ಪ್ರೊ.ದಿನೇಶ್ ಚೌಟ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಶ್ರೀನಿವಾಸ ವಿಶ್ವವಿದ್ಯಾನಿಲಯದ ಸಂಸ್ಕೃತ ಸಂಶೋಧನಾ ಮಾರ್ಗದರ್ಶಕ ಡಾ.ಶ್ರೀಕಾಂತ ಬಾಳ್ತಿಲ್ಲಾಯ ಕನ್ಯಾಡಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ಪ್ರಸನ್ನಕುಮಾರ್ ಐತಾಳ್ ಪ್ರತಿಜ್ಞಾವಿಧಿ ಬೋಧಿಸಿದರು. ಸಂಸ್ಕೃತ ಸಂಘದ ಅಧ್ಯಕ್ಷೆ ಧರಿತ್ರಿ ಭಿಡೆ, ಉಪಾಧ್ಯಕ್ಷ ವಿರೂಪಾಕ್ಷ ಸಂಸ್ಕೃತ ಅಂತರಾಧ್ಯಾಯನ ವೃತ್ತಮ್ ನ ಸಂಯೋಜಕ ವಿದ್ಯಾರಣ್ಯ ಶರ್ಮ ಸಿಂಚನಾ ಪಾಳಂದ್ಯೆ ಮತ್ತಿತರರು ಉಪಸ್ಥಿತರಿದ್ದರು. ಧಾರಣಿ ಸ್ವಾಗತಿಸಿದರು. ಧರಿತ್ರಿ ವಂದಿಸಿದರು.

Leave a Reply

You May Have Missed

error: Content is protected !!