ಮುಂಡ್ರುಪ್ಪಾಡಿ : ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಚೈತ್ರಾ ಅಡಿಗ

ಮುಂಡ್ರುಪ್ಪಾಡಿ : ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಚೈತ್ರಾ ಅಡಿಗ

ನೇಸರ ಆ.04: ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಮುಂಡ್ರುಪ್ಪಾಡಿ ನಿವಾಸಿಯಾಗಿರುವ ವಿವಾಹಿತ ಮಹಿಳೆಯೊಬ್ಬರು ಗುರುವಾರ ಮನೆಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಮೃತ ಮಹಿಳೆ ಇಲ್ಲಿನ ನಿವಾಸಿ ದೀಪಕ್ ಎಂಬವರ ಪತ್ನಿ ಚೈತ್ರಾ ಅಡಿಗ ಎಂಬವರಾಗಿದ್ದಾರೆ. ಇವರು ಉಜಿರೆ ಖಾಸಗಿ ಶಾಲೆಯ ಶಿಕ್ಷಕಿಯಾಗಿ ಕೆಲ ಕಾಲ ಕೆಲಸ ಮಾಡಿದ್ದರು. ಇದೀಗ ಮನೆಯಲ್ಲಿಯೇ ಇದ್ದರು ಎನ್ನಲಾಗಿದೆ. ಮೂರು ವರ್ಷದ ಹಿಂದೆ ಇವರ ವಿವಾಹವಾಗಿದ್ದು ಇವರಿಗೆ ಒಂದು ಮಗುವೂ ಇದೆ. ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಈಕೆ ಸಕ್ರಿಯರಾಗಿದ್ದರು. ಎಂ.ಎ.ಪೂರೈಸಿದ್ದ ಇವರು ಬಿ.ಎಡ್ ವಿದ್ಯಾಭ್ಯಾಸ ಮಾಡುವ ಇಂಗಿತವನ್ನು ಹೊಂದಿದ್ದು,ಗಂಡನ ಮನೆಯವರು ಮುಂದಿನ ವರ್ಷ ತರಗತಿಗೆ ಸೇರುವಂತೆ ತಿಳಿಸಿದ್ದರು ಎಂದು ಹೇಳಲಾಗಿದೆ. ಈ ಬಗ್ಗೆ ಪುಷ್ಪವೇಣಿ ಎಂಬವರು ದೂರು ನೀಡಿದ್ದು
ಘಟನಾ ಸ್ಥಳಕ್ಕೆ ಬೆಳ್ತಂಗಡಿ ತಹಸೀಲ್ದಾರ್ ಹಾಗೂ ಧರ್ಮಸ್ಥಳ ಪೊಲೀಸರು ಭೇಟಿ ತನಿಖೆ ನಡೆಸಿದ್ದಾರೆ.

Leave a Reply

You May Have Missed

error: Content is protected !!