ಪಾರ್ಪಿಕಲ್ಲು: ತೋಟಕ್ಕೆ ದಾಳಿ ನಡೆಸಿದ ಕಾಡಾನೆ; ಕೃಷಿ ಹಾನಿ

ಪಾರ್ಪಿಕಲ್ಲು: ತೋಟಕ್ಕೆ ದಾಳಿ ನಡೆಸಿದ ಕಾಡಾನೆ; ಕೃಷಿ ಹಾನಿ

ನೇಸರ ಆ.07: ನಿಡ್ಲೆ ಗ್ರಾಮದ ಪಾರ್ಪಿಕಲ್ಲು ಸಮೀಪದ ಗುಡ್ಡೆತೋಟ ನಿವಾಸಿ ಜಯರಾಮ ಪಾಳಂದ್ಯೆ ಅವರ ತೋಟಕ್ಕೆ ಶನಿವಾರ ರಾತ್ರಿ ದಾಳಿ ನಡೆಸಿದ ಕಾಡಾನೆಗಳು ಒಂದು ತೆಂಗಿನ ಮರ, ಎರಡು ತೆಂಗಿನ ಸಸಿ ಹಾಗೂ 50ಕ್ಕಿಂತ ಹೆಚ್ಚು ಫಲ ಬಿಟ್ಟ ಬಾಳೆಗಿಡಗಳನ್ನು ಧ್ವಂಸ ಮಾಡಿವೆ.

ಒಂದಕ್ಕಿಂತ ಹೆಚ್ಚು ಆನೆ ಬಂದಿರುವುದು ಹೆಜ್ಜೆ ಗುರುತಿನ ಮೂಲಕ ದೃಢವಾಗಿದೆ. ಕಳೆದ 15ದಿನಗಳ ಹಿಂದೆಯೂ ಇವರ ತೋಟಕ್ಕೆ ಕಾಡಾನೆ ದಾಳಿ ನಡೆಸಿ ಕೃಷಿ ಹಾನಿಯಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.

Leave a Reply

You May Have Missed

error: Content is protected !!