ನೆಲ್ಯಾಡಿ ಪಾ.ಕೃ.ಪ. ಸಹಕಾರ ಸಂಘಕ್ಕೆ ವಿಶೇಷ ಸಾಧನೆಗಾಗಿ ಸತತ ನಾಲ್ಕನೇ ಬಾರಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಪ್ರಶಸ್ತಿ

ನೆಲ್ಯಾಡಿ ಪಾ.ಕೃ.ಪ. ಸಹಕಾರ ಸಂಘಕ್ಕೆ ವಿಶೇಷ ಸಾಧನೆಗಾಗಿ ಸತತ ನಾಲ್ಕನೇ ಬಾರಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಪ್ರಶಸ್ತಿ

ನೇಸರ ಆ.07: ನೆಲ್ಯಾಡಿ ತನ್ನ ವಿಶೇಷ ಸಾಧನೆಗಾಗಿ ನೆಲ್ಯಾಡಿ ಪಾ.ಕೃ.ಪ. ಸಹಕಾರ ಸಂಘಕ್ಕೆ ಸತತ ನಾಲ್ಕನೇ ಬಾರಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಪ್ರಶಸ್ತಿ ಲಭಿಸಿದೆ. ಆಗಸ್ಟ್ 5 ರಂದು ಮಂಗಳೂರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ವಾರ್ಷಿಕ ಮಹಾಸಭೆಯಲ್ಲಿ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ ಎನ್ ರಾಜೇಂದ್ರ ಕುಮಾರ್ ಪ್ರಶಸ್ತಿ ಪ್ರಧಾನ ಮಾಡಿದರು. ಪ್ರಶಸ್ತಿಯನ್ನು ಸಂಘದ ಅಧ್ಯಕ್ಷ ಉಮೇಶ್ ಶೆಟ್ಟಿ ಮತ್ತು ಮುಖ್ಯ ಕಾರ್ಯನಿರ್ವಹಣಾಕಾರಿ ದಯಾಕರ ರೈ ಕೆ ಎಂ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಕಮಲಾಕ್ಷ ಗೌಡ, ನಿರ್ದೇಶಕರಾದ ಬಾಲಕೃಷ್ಣ ಬಾಣಜಾಲು ಉಷಾ ಅಂಚನ್ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ಬಾಲ್ಯೊಟ್ಟು, ಜಯರಾಮ ರೆ` ಬಳಜ್ಜ, ಸಹ2ಕಾರ ಸಂಘಗಳ ಉಪ ನಿರ್ಬಂಧಕ ಪ್ರವೀಣ್ ನಾಯಕ್, ಬ್ಯಾಂಕ್‌ನ ಪ್ರಬಾರ ಮುಖ್ಯ ಕಾರ್ಯನಿರ್ವಾಹಣಾಕಾರಿ ರವೀಂದ್ರ ಬಿ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬೆಳ್ಳಿಪ್ಪಾಡಿ ಕೌಶಲ್ ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

Leave a Reply

You May Have Missed

error: Content is protected !!