ಕಾಲ್ನಡಿಗೆಯಲ್ಲಿ ಕಡಬದಿಂದ ಲಡಾಕ್ ಗೆ ತೆರಳಿದ ಯುವಕರಿಗೆ ಸನ್ಮಾನ

ಕಾಲ್ನಡಿಗೆಯಲ್ಲಿ ಕಡಬದಿಂದ ಲಡಾಕ್ ಗೆ ತೆರಳಿದ ಯುವಕರಿಗೆ ಸನ್ಮಾನ

ನೇಸರ ನ 24: ಚೀನಾ, ಟಿಬೆಟ್ ಹಾಗೂ ಪಾಕಿಸ್ತಾನಗಳಿಂದ ಸುತ್ತುವರಿದಿರುವ ಕೇಂದ್ರಾಡಳಿತ ಪ್ರದೇಶ ಲಡಾಕ್ ಗೆ ಕಡಬದಿಂದ ಕಾಲ್ನಡಿಗೆಯಲ್ಲಿ ತೆರಳಿ ಸಾಧನೆಗೈದ 3 ಯುವಕರನ್ನು ಕುಟ್ರುಪಾಡಿ ವಿಮಲಗಿರಿ ಸೈಂಟ್ ಮೇರಿಸ್ ಮಲಂಕರ ಕ್ಯಾಥೋಲಿಕ್ ಚರ್ಚ್‍ನಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಕಡಬ ತಾಲೂಕಿನ ಕುಟ್ರುಪಾಡಿ ಗ್ರಾಮದ ವಿಮಲಗಿರಿಯ ಸಂಪ್ರೀತ್, ಐತ್ತೂರು ಗ್ರಾಮದ ಬೆತ್ತೋಡಿಯ ಸೆಬಾಸ್ಟಿಯನ್ ಹಾಗೂ ಕೊಣಾಜೆಯ ನಿಶಾಂತ್ ಕಾಲ್ನಡಿಗೆಯಲ್ಲಿ ಲಡಾಕ್ ಗೆ ತೆರಳಿ ಸಾಹಸದ ಸಾಧನೆಗೈದು ಸನ್ಮಾನ ಸ್ವೀಕರಿಸಿದರು, ಚರ್ಚೆನ ಎಂಸಿವೈಎಂ ವಿಮಲಗಿರಿ ಘಟಕದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಯಿತು. ಚರ್ಚ್ ಧರ್ಮಗುರು ವಂ. ಥಾಮಸ್ ಕುಯಿನಾಪುರತ್, ವಂ.ಸಿಸ್ಟರ್ ಶುಭಾ.ಡಿ.ಎಂ, ಎಂಸಿವೈಎಂ ಆ್ಯನಿಮೇಟರ್‍ ಗಳಾದ ಉಷಾ ಮನೋಜ್, ಅಜೇಶ್, ಎಂಸಿವೈಎಂ ಅಧ್ಯಕ್ಷ ಜಿಬಿನ್, ಕಾರ್ಯದರ್ಶಿ ಜೋತ್ಸ್ನಾ ಮೊದಲಾದವರು ಉಪಸ್ಥಿತರಿದ್ದರು. ಎಂಸಿವೈಎಂ ಪದಾಧಿಕಾರಿ ಆಶಾ ಸ್ವಾಗತಿಸಿ, ಅಮಲ್ ವಂದಿಸಿದರು, ಸ್ನೇಹಾ ನಿರೂಪಿಸಿದರು.

Leave a Reply

You May Have Missed

error: Content is protected !!