ನೆಲ್ಯಾಡಿ ಪ್ರಗತಿ ಬಂಧು ಸ್ವಸಹಾಯ ಒಕ್ಕೂಟ ವತಿಯಿಂದ ಶ್ರದ್ಧಾ ಕೇಂದ್ರದ ಸ್ವಚ್ಚತೆ

ನೆಲ್ಯಾಡಿ ಪ್ರಗತಿ ಬಂಧು ಸ್ವಸಹಾಯ ಒಕ್ಕೂಟ ವತಿಯಿಂದ ಶ್ರದ್ಧಾ ಕೇಂದ್ರದ ಸ್ವಚ್ಚತೆ

ನೇಸರ ಆ.10: ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಶ ವೀರೇಂದ್ರ ಹೆಗ್ಗಡೆಯವರ ಆಶಯ ಹಾಗೂ ಮಾರ್ಗದರ್ಶನದೊಂದಿಗೆ ರಾಜ್ಶಾದ್ಶಂತ ಸ್ವಾತಂತ್ರ್ಶ ದಿನಾಚರಣೆಯ ಪೂರ್ವದಲ್ಲಿ ಶೃಧ್ಧಾಕೇಂದ್ರಗಳ ಸ್ವಚ್ಚತೆ ಕಾರ್ಯಕ್ರಮವನ್ನು ನಡೆಸುತ್ತಿದ್ದು ಕಡಬ ತಾಲೂಕಿನ ಪ್ರಗತಿ ಬಂಧು ಸ್ವಸಹಾಯ ಒಕ್ಕೂಟ ನೆಲ್ಯಾಡಿ ವತಿಯಿಂದ ಶ್ರದ್ಧಾ ಕೇಂದ್ರದ ಸ್ವಚ್ಛತೆ ಕಾರ್ಯಕ್ರಮ ಇಂದು(ಆ.10) ನಡೆಯಿತು.
ನೆಲ್ಯಾಡಿ ಪ್ರಗತಿ ಬಂಧು ಸ್ವಸಹಾಯ ಒಕ್ಕೂಟದ ವತಿಯಿಂದ ನೆಲ್ಯಾಡಿ- ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯಕ್ರಮ ಮಾಡಲಾಯಿತು.
ಗ್ರಾಮಾಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕ ವಿಜೇಶ್ ಜೈನ್, ಸೇವಾ ಪ್ರತಿನಿಧಿ ಹೇಮಾವತಿ ಜಿ ಇವರ ಉಪಸ್ಥಿತಿಯಲ್ಲಿ, ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ಡಾ.ಸದಾನಂದ ಕುಂದರ್, ಕಾರ್ಯದರ್ಶಿ ರಾಕೇಶ್, ನೆಲ್ಯಾಡಿ ಜನಜಾಗೃತಿ ವೇದಿಕೆ ವಲಯಾಧ್ಯಕ್ಷರಾದ ಜಯಾನಂದ ಬಂಟ್ರಿಯಲ್, ಪ್ರಗತಿ ಬಂಧು ಒಕ್ಕೂಟದ ಅಧ್ಯಕ್ಷರಾದ ವಾಲ್ಟರ್ ಡಿಸೋಜಾ, ಕಾರ್ಯದರ್ಶಿ ಹರೀಶ್ ಶೆಟ್ಟಿ, ಸುಮಿತ್ರ, ಮೋಹಿನಿ, ತುಕಾರಾಮ ರೈ, ಪ್ರೇಮಾವತಿ, ಸುನಿತಾ, ಗುಲಾಬಿ, ಅನಿತಾ, ಲೀಲಾವತಿ, ಹೇಮಾವತಿ, ವಾರಿಜ, ಬೇಬಿ, ಜಲಜಾಕ್ಷಿ, ಚೇತನ್ ಕುಮಾರ್, ಶಶಿಪ್ರಭಾ, ಶ್ರೇಯ ರವರುಗಳ ಪಾಲ್ಗೊಳ್ಳುವಿಕೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

Previous post

ಜೋಯಾಲುಕ್ಕಾಸ್ ಫೌಂಡೇಷನ್ ವತಿಯಿಂದ ಉಡುಪಿ ಜಿಲ್ಲಾಸ್ಪತ್ರೆಗೆ ಡಯಾಲಿಸಿಸ್ ಯಂತ್ರ ಕೊಡುಗೆ-ಶಾಸಕ ರಘುಪತಿ ಭಟ್ ಉದ್ಘಾಟನೆ

Next post

ಮನೆ ಮನೆಗೆ ರಾಷ್ಟ್ರಧ್ವಜ ಪರಿಕಲ್ಪನೆಗೆ ಗ್ರಾಮ ಮಟ್ಟದಲ್ಲಿ ಭರದ ತಯಾರಿ ➽ ಹೆಚ್ಚಿದ ಬೇಡಿಕೆ

Leave a Reply

You May Have Missed

error: Content is protected !!