ಟಿಪ್ಪರ್ ಹಾಗೂ ಸ್ಕೂಟರ್ ಡಿಕ್ಕಿ ➤ ಅಪಾಯದಿಂದ ಪಾರಾದ ತಾಯಿ,ಮಗ

ಟಿಪ್ಪರ್ ಹಾಗೂ ಸ್ಕೂಟರ್ ಡಿಕ್ಕಿ ➤ ಅಪಾಯದಿಂದ ಪಾರಾದ ತಾಯಿ,ಮಗ

ನೇಸರ ಆ.25: ನೆಲ್ಯಾಡಿಯ ಕಾಂಚನ ಶಾಂತಿನಗರ ಮಧ್ಯೆ ಗೋಳಿತೊಟ್ಟು ಗ್ರಾಮದ ನೂಜೋಲು ಎಂಬಲ್ಲಿ ಮರಳು ಸಾಗಿಸುವ ಟಿಪ್ಪರ್ ಹಾಗೂ ಸ್ಕೂಟಿ ನಡುವೆ ಅಪಘಾತ ಸಂಭವಿಸಿ. ಸ್ಕೂಟಿಯಲ್ಲಿ ಪ್ರಯಾಣಿಸುತ್ತಿದ್ದ ತಾಯಿ ಮತ್ತು ಮಗ ಗಾಯಗೊಂಡ ಘಟನೆ ಆ. 25ರ ಮಧ್ಯಾಹ್ನ ನಡೆದಿದೆ.

ಉಪ್ಪಿನಂಗಡಿ ಕಡೆಯಿಂದ ನೂಜೋಲು ನಿವಾಸಿ ಕುಶಾಲಪ್ಪ ಹಾಗೂ ಅವರ ತಾಯಿ ಸ್ಕೂಟಿಯಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ವಿರುದ್ಧ ದಿಕ್ಕಿನಿಂದ ಅತಿವೇಗದಲ್ಲಿ ಬಂದ ಮರಳು ಸಾಗಿಸುವ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಟಿಪ್ಪರ್ ನ ಅಡಿಗೆ ಬಿದ್ದಿದ್ದ ಮಹಿಳೆಯನ್ನು ಎರಡು ಕ್ರೈನ್ ಗಳ ಸಹಾಯದಿಂದ ಟಿಪ್ಪರನ್ನು ಮೇಲೆತ್ತಿ ಮಹಿಳೆಯನ್ನು ಹೊರತೆಗೆಯಲಾಯಿತು ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಹಾಗೂ ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿದ್ದರು.

Leave a Reply

You May Have Missed

error: Content is protected !!