ಅರಂತೋಡು: ಅರಂತೋಡು ಕಾಲೇಜು ವತಿಯಿಂದ ಕೆದಂಬಾಡಿ ರಾಮಯ್ಯ ಗೌಡ ರ ಕಂಚಿನ ಪ್ರತಿಮೆಗೆ ಭವ್ಯ ಸ್ವಾಗತ

ಅರಂತೋಡು: ಅರಂತೋಡು ಕಾಲೇಜು ವತಿಯಿಂದ ಕೆದಂಬಾಡಿ ರಾಮಯ್ಯ ಗೌಡ ರ ಕಂಚಿನ ಪ್ರತಿಮೆಗೆ ಭವ್ಯ ಸ್ವಾಗತ

ನೇಸರ ಆ.29:ನೆಹರು ಸ್ಮಾರಕ ಪದವಿಪೂರ್ವ ಕಾಲೇಜು ಅರಂತೋಡು ಇಲ್ಲಿನ ಆಡಳಿತ ಮಂಡಳಿ ಮತ್ತು ಕಾಲೇಜಿನ ವತಿಯಿಂದ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ರ ಕಂಚಿನ ಪ್ರತಿಮೆ ಪುರಪ್ರವೇಶ ವನ್ನು ಶಿಕ್ಷಕರಾದ ಮನೋಜ್ ಮತ್ತು ಸಂದೇಶ್ ನೇತೃತ್ವದಲ್ಲಿ ಸ್ಕೌಟ್ಸ್ ತಂಡದ ಬ್ಯಾಂಡಿನೊಂದಿಗೆ, ಕಾಲೇಜಿನ ಸಂಚಾಲಕರಾದ ಕೆ ಆರ್ ಗಂಗಾಧರ್, ಪ್ರಾಂಶುಪಾಲ ರಮೇಶ್, ಮುಖ್ಯ ಗುರು ಸೀತಾರಾಮ, ರಥಕ್ಕೆ ಮಾಲಾರ್ಪಣೆ ಮಾಡಿದರು.

ಇತಿಹಾಸ ಉಪನ್ಯಾಸಕ ಮೋಹನ್ ಚಂದ್ರ ತೆಂಗಿನ ಕಾಯಿ ಒಡೆದು ರಥಕ್ಕೆ ಸ್ವಾಗತಿಸಿದರು. ಕಾಲೇಜಿನ ವಿದ್ಯಾರ್ಥಿಗಳು ಮಾರ್ಗದ ಇಕ್ಕೆಲಗಳಲ್ಲಿ ನಿಂತು ರಥಕ್ಕೆ ಪುಷ್ಪಾರ್ಚನೆ ಮಾಡಿದರು. ಕಾಲೇಜಿನ ಬೋಧಕರಾದ ಸುರೇಶ್ ವಾಗ್ಲೆ, ಲಿಂಗಪ್ಪ, ಗೌರಿಶಂಕರ, ಕಿಶೋರ್ ಕುಮಾರ್, ಸೋಮಶೇಖರ್, ಮಮತ, ಶ್ರೀಲತಾ, ಕುಸುಮಾವತಿ, ಅಶ್ವಿನಿ, ಭಾಗ್ಯಶ್ರೀ, ನಂದಿನಿ, ನಯನಾ, ವಿದ್ಯಾಶಾಲಿನಿ, ದಿವ್ಯ, ಲಿಖಿತ, ವಿಜಯ್, ಭವ್ಯ, ಅಶ್ವಿನಿ, ಚಂದ್ರಶೇಖರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Previous post

ಕಾಂಚನ: ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಕಾಂಚನ ಹಿರಿಯ ಪ್ರಾಥಮಿಕ ಶಾಲೆಗೆ ಸಮಗ್ರ ಪ್ರಶಸ್ತಿ

Next post

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ : ಕಬ್ ವಿಭಾಗದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಗೆ ರಾಷ್ಟ್ರಮಟ್ಟದ ಗೋಲ್ಡನ್ ಆ್ಯರೋ ಪ್ರಶಸ್ತಿ

Leave a Reply

You May Have Missed

error: Content is protected !!