ಪ್ರೊ ಕಬಡ್ಡಿ ಸೀಸನ್ 8:ಪಾಟ್ನಾ ಪೈರೇಟ್ಸ್ ನಾಯಕನಾಗಿ ಪ್ರಶಾಂತ್ ರೈ ಕೈಕಾರ

ಪ್ರೊ ಕಬಡ್ಡಿ ಸೀಸನ್ 8:ಪಾಟ್ನಾ ಪೈರೇಟ್ಸ್ ನಾಯಕನಾಗಿ ಪ್ರಶಾಂತ್ ರೈ ಕೈಕಾರ

ನೇಸರ ಡಿ1 : ಪ್ರೊ ಕಬ್ಬಡಿ ಸೀಸನ್ 8ರ ಪ್ರತಿಷ್ಠಿತ ಪಾಟ್ನಾ ಪೈರೇಟ್ಸ್ ತಂಡದ ನಾಯಕನಾಗಿ ಕರ್ನಾಟಕದ ತಂಡದ ಮಾಜಿ ನಾಯಕ ಪ್ರಶಾಂತ್ ರೈ ಕೈಕಾರ ಆಯ್ಕೆಯಾಗಿದ್ದಾರೆ. ಈ ಬಾರಿಯ ಬೆಂಗಳೂರಿನಲ್ಲಿ ಪ್ರೊ ಕಬಡ್ಡಿ ಲೀಗ್‌ನ ಸೀಸನ್ 8ರ ಪಂದ್ಯ ಡಿ.22ರಿಂದ ನಡೆಯಲಿವೆ.
ಕರ್ನಾಟಕ ಕಬಡ್ಡಿ ತಂಡದ ಮಾಜಿ ನಾಯಕನಾಗಿರುವ ಪ್ರಶಾಂತ್ ರೈ, ವಿಜಯಾ ಬ್ಯಾಂಕ್‌ನ ಕಬಡ್ಡಿ ತಂಡದ ನಾಯಕನಾಗಿದ್ದಾರೆ.ಪ್ರೊ ಕಬಡ್ಡಿ ಲೀಗ್‌ನ ಮೊದಲ ಮೂರು ಆವೃತ್ತಿಗಳಲ್ಲಿ ತೆಲುಗು ಟೈಟಾನ್ಸ್ ತಂಡದ ಸದಸ್ಯರಾಗಿದ್ದ ಪ್ರಶಾಂತ್ ರೈ ಅವರು ಬಳಿಕ ದಬಾಂಗ್ ಡೆಲ್ಲಿ,ಬಳಿಕ ಹರಿಯಾಣ ಸ್ಟೀಲರ್ಸ್ ತಂಡ ಹಾಗೂ ಯುಪಿ ಯೋಧ ತಂಡವನ್ನು ಪ್ರತಿನಿಧಿಸಿದ್ದರು.

ಒಳಮೊಗ್ರು ಗ್ರಾಮದ ಕೈಕಾರ ನಿವಾಸಿ,ದಿ.ಸೀತಾರಾಮ ರೈ ಯವರ ಪುತ್ರ ಪ್ರಶಾಂತ್ ರೈ ಅವರು ಬೆಂಗಳೂರಿನಲ್ಲಿ ವಿಜಯಾ ಬ್ಯಾಂಕ್‌ನಲ್ಲಿ ಉದ್ಯೋಗದಲ್ಲಿದ್ದು, ಪತ್ನಿ ವಜ್ರೇಶ್ವರಿ ರೈ ಮತ್ತು ಪುತ್ರ ಶತಾಯು ರೈ ಜತೆ ಬೆಂಗಳೂರಿನಲ್ಲಿ ವಾಸವಿದ್ದಾರೆ. ಪ್ರಶಾಂತ್ ರೈ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಕಬಡ್ಡಿ ಕ್ರೀಡೆಯನ್ನು ಕೋಚ್ ಹಬೀಬ್ ಮತ್ತು ಫಿಲೋಮಿನಾ ಕಾಲೇಜಿನ ಕೋಚ್ ಇಲಿಯಾಸ್ ಪಿಂಟೋ ಅವರ ಮಾರ್ಗದರ್ಶನದಲ್ಲಿ ಕಬಡ್ಡಿ ಆಟದ ಕೌಶಲ್ಯಗಳನ್ನು ಬೆಳೆಸಿಕೊಂಡಿದ್ದರು.
ಹರಾಜಿನಲ್ಲಿ ಪ್ರಶಾಂತ್ ಕುಮಾರ್ ರೈ, ಯುಪಿ ಯೋಧಾಸ್ ತಂಡಕ್ಕೆ 79 ಲಕ್ಷ ರೂ.ಗಳಿಗೆ ಮಾರಾಟಗೊಂಡಿದ್ದರು. ಈ ಮೂಲಕ ರಾಜ್ಯದ ಪರ ಅತ್ಯಧಿಕ ಮೊತ್ತ
ಪಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ.

Leave a Reply

You May Have Missed

error: Content is protected !!