ವಿದ್ಯುತ್ ಕಂಬಕ್ಕೆ ಬಡಿದ ಗೂಡ್ಸ್ ಲಾರಿ

ವಿದ್ಯುತ್ ಕಂಬಕ್ಕೆ ಬಡಿದ ಗೂಡ್ಸ್ ಲಾರಿ

ನೇಸರ ಸೆ.3: ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆಯ ಚರ್ಚ್ ಕ್ರಾಸ್ ಬಳಿ ಬೆಳ್ತಂಗಡಿಯಿಂದ ಕೊಟ್ಟಿಗೆಹಾರ ಕಡೆ ಸಂಚರಿಸುತ್ತಿದ್ದ ಗೂಡ್ಸ್ ಲಾರಿ ಮುಂಡಾಜೆ ಫೀಡರ್‌ ಗೆ ವಿದ್ಯುತ್ ಪೂರೈಸುವ ಮೈನ್ ಲೈನಿನ ಕಂಬಕ್ಕೆ ಸೆ.2ರ ತಡರಾತ್ರಿ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬ ತುಂಡಾಗಿ ತಂತಿಗಳು ಅಸ್ತವ್ಯಸ್ತವಾಗಿ ಮುಂಡಾಜೆ ಪ್ರದೇಶದ ಅನೇಕ ಗ್ರಾಹಕರಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಯಿತು.

ಗೂಡ್ಸ್ ಲಾರಿಗೂ ಹಾನಿ ಉಂಟಾಗಿದ್ದು ಚಾಲಕ ನಿರ್ವಾಹಕ ಅಪಾಯದಿಂದ ಪಾರಾಗಿದ್ದಾರೆ.
ಮುಂಡಾಜೆ ಕಡೆಗೆ ನಿಡಿಗಲ್ ಮೂಲಕ ಬೆಳಾಲು ಫೀಡರ್ ನಿಂದ ವಿದ್ಯುತ್ ಪೂರೈಕೆ ಮಾಡುವ ಬದಲಿ ವ್ಯವಸ್ಥೆ ಇದ್ದರೂ ಇಲ್ಲಿನ ವಿದ್ಯುತ್ ಕಂಬಗಳ ಸ್ಟೇವಯರ್ ತುಂಡಾಗಿ ಕಂಬಗಳು ನೆಲದತ್ತ ವಾಲಿ ನಿಂತಿರುವ ಕಾರಣದಿಂದ ಆ ಭಾಗದಿಂದಲೂ ವಿದ್ಯುತ್ ಪೂರೈಕೆ ವ್ಯವಸ್ಥೆ ಮಾಡುವಲ್ಲಿ ಮೆಸ್ಕಾಂ ವಿಫಲವಾಗಿದೆ.
ಪ್ರತಿದಿನ ಒಂದಲ್ಲ ಒಂದು ಕಾರಣದಿಂದ ಮುಂಡಾಜೆ ಭಾಗಕ್ಕೆ ವಿದ್ಯುತ್ ಪೂರೈಕೆ ಸಮಸ್ಯೆ ಉಂಟಾಗುತ್ತಿರುವ ಬಗ್ಗೆ ಗ್ರಾಹಕರಿಂದ ಆಕ್ರೋಶ ವ್ಯಕ್ತವಾಗಿದೆ.

Leave a Reply

You May Have Missed

error: Content is protected !!