ಉಜಿರೆ: ಅಗ್ನಿ ದುರಂತ, ನಳಿನ್ ಭೇಟಿ

ಉಜಿರೆ: ಅಗ್ನಿ ದುರಂತ, ನಳಿನ್ ಭೇಟಿ

ನೇಸರ ಸೆ.04: ಉಜಿರೆ ಇಲ್ಲಿನ ಅನುಗ್ರಹ ಶಾಲೆಯ ಮುಂಭಾಗ ಬುಧವಾರ ಅಗ್ನಿ ಅನಾಹುತದಿಂದ ಕೋಟಿ ರೂ.ಮೌಲ್ಯದ ಸೊತ್ತುಗಳು ಹಾನಿಯಾದ ರಕ್ಷಾ ಆಗ್ರೋ ಸೆಂಟರ್ ಹಾಗೂ ಅನಾರ್ ಟಯರ್ ಅಂಗಡಿಗಳಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ ನೀಡಿ ವೀಕ್ಷಣೆ ನಡೆಸಿದರು.
ಅಗ್ನಿ ಅನಾಹುತದಿಂದ ಈ ಎರಡು ಅಂಗಡಿಗಳು ಹಾಗೂ ಸಮೀಪದ ಹೋಟೆಲ್ ಸೇರಿ ಸುಮಾರು 1.25 ಕೋಟಿ ರೂ.ಗಿಂತ ಅಧಿಕ ನಷ್ಟ ಉಂಟಾಗಿದೆ.
ಅಂಗಡಿ ಮಾಲಕರೊಂದಿಗೆ ಮಾತುಕತೆ ನಡೆಸಿದ ಸಂಸದರು ಅಗತ್ಯ ನೆರವು ನೀಡುವ ಭರವಸೆ ನೀಡಿದರು. ವಾಣಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪಿ.ಕುಶಾಲಪ್ಪ ಗೌಡ ಹಾಗೂ ಇತರರು ಉಪಸ್ಥಿತರಿದ್ದರು.

Leave a Reply

You May Have Missed

error: Content is protected !!