ಗೋಳಿತ್ತೊಟ್ಟು: ಮಹೇಶ್ ಡೆಬ್ಬೆಲಿ ಸ್ಮರಣಾರ್ಥವಾಗಿ ಬೃಹತ್ ರಕ್ತದಾನ ಶಿಬಿರ

ಗೋಳಿತ್ತೊಟ್ಟು: ಮಹೇಶ್ ಡೆಬ್ಬೆಲಿ ಸ್ಮರಣಾರ್ಥವಾಗಿ ಬೃಹತ್ ರಕ್ತದಾನ ಶಿಬಿರ

ನೇಸರ ಸೆ.08: ವಿಶ್ವ ಹಿಂದೂ ಪರಿಷತ್ ಬಜರಂಗದಳ ಗೋಳಿತ್ತೊಟ್ಟು ಘಟಕ, ಉಪ್ಪಿನಂಗಡಿ ಪ್ರಖಂಡ ವತಿಯಿಂದ ದಿನಾಂಕ 11-09-2022 ನೇ ಆದಿತ್ಯವಾರ ಎ.ಜೆ.ಆಸ್ಪತ್ರೆ ಮಂಗಳೂರು ಇದರ ಸಹಯೋಗದೊಂದಿಗೆ ಗೋಳಿತ್ತೊಟ್ಟು ಘಟಕದ ಸಕ್ರಿಯ ಸದಸ್ಯರಾದ ಮಹೇಶ್ ಡೆಬ್ಬೆಲಿ ಸ್ಮರಣಾರ್ಥವಾಗಿ ಬೃಹತ್ ರಕ್ತದಾನ ಶಿಬಿರ ಶ್ರೀ ಸಿದ್ದಿವಿನಾಯಕ ಭಜನಾ ಮಂದಿರದ ಸಭಾಂಗಣದಲ್ಲಿ ನಡೆಯಲಿದೆ.
ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಚಾಲಕರಾದ ರಘು ಸಕಲೇಶಪುರ ಶಿಬಿರ ಉದ್ಘಾಟಿಸಲಿದ್ದಾರೆ. ಅಥಿತಿಗಳಾಗಿ ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಉಪಾಧ್ಯಕ್ಷರಾದ ಭಾಸ್ಕರ ಧರ್ಮಸ್ಥಳ, ಜಿಲ್ಲಾ ಸಹ ಕಾರ್ಯದರ್ಶಿಯವರಾದ ನವೀನ್ ನೆರಿಯ, ಎ.ಜೆ.ಆಸ್ಪತ್ರೆಯ ರಕ್ತನಿಧಿ ಕೇಂದ್ರದ ವ್ಯವಸ್ಥಪಕರಾದ ಗೋಪಾಲಕೃಷ್ಣ, ವಿಶ್ವ ಹಿಂದೂ ಪರಿಷತ್ ಉಪ್ಪಿನಂಗಡಿ ಪ್ರಖಂಡದ ಅದ್ಯಕ್ಷರಾದ ಸುದರ್ಶನ್ ಸಿದ್ದಿ ವಿನಾಯಕ ಸೇವಾ ಸಮಿತಿ ಅದ್ಯಕ್ಷರಾದ ಬಾಲಕೃಷ್ಣ ಅಲೆಕ್ಕಿ, ಪ್ರಗತಿಪರ ಕೃಷಿಕರಾದ ವೆಂಕಟ್ರಮಣ ಸುಲ್ತಾಜೆಯವರು ಭಾಗವಹಿಲಿದ್ದಾರೆ.
ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದಾನ ಮಾಡಿ ಜೀವದಾನ ಮಾಡುವಂತೆ ಸಂಘಟಕರು ವಿನಂತಿಸಿರುತ್ತಾರೆ.

Leave a Reply

You May Have Missed

error: Content is protected !!