ಉಪ್ಪಿನಂಗಡಿ: ಜೇಸಿ ಸಪ್ತಾಹ ಸ್ಪಂದನ ಮತ್ತು ನಮಸ್ತೆ 2022 ಉದ್ಘಾಟನೆ

ಉಪ್ಪಿನಂಗಡಿ: ಜೇಸಿ ಸಪ್ತಾಹ ಸ್ಪಂದನ ಮತ್ತು ನಮಸ್ತೆ 2022 ಉದ್ಘಾಟನೆ

ನೇಸರ ಸೆ.11: ಉಪ್ಪಿನಂಗಡಿ:ಜೇಸಿಐ ಉಪ್ಪಿನಂಗಡಿ ಘಟಕ, ಯುವ ಜೇಸಿ ವಿಭಾಗ ಹಾಗೂ ಜೇಸಿಐ ಉಪ್ಪಿನಂಗಡಿ ಚಾರಿಟೇಬಲ್ ಟ್ರಸ್ಟ್ (ರಿ.) ಉಪ್ಪಿನಂಗಡಿ ಇದರ 44ನೇ ವರ್ಷದ ಜೇಸಿ ಸಪ್ತಾಹ ಸ್ಪಂದನ ಮತ್ತು ಜೇಸಿಐ ಭಾರತದ ನಮಸ್ತೆ 2022 ಕಾರ್ಯಕ್ರಮ ಸೇವಾ ಭಾರತಿ ಮಂಗಳೂರು (ರಿ.) ಅಂಗ ಸಂಸ್ಥೆಯಾದ ವಿದ್ಯಾ ಚೇತನಾ ವಿಶೇಷ ಮಕ್ಕಳ ಶಾಲೆ ರಾಮಕುಂಜದಲ್ಲಿ ಉದ್ಘಾಟನೆಗೊಂಡಿತು.

ವಲಯದ ಉಪಾಧ್ಯಕ್ಷರಾದ ಜೇಸಿ ದೀಪಕ್ ಗಂಗೂಲಿ ದೀಪ ಬೆಳಗಿಸಿ ನೆರವೇರಿಸಿ, ಮಾತನಾಡಿ, ವಿಶೇಷ ಮಕ್ಕಳ ಶಾಲೆಗೆ ಆಹಾರ ಕಿಟ್ ವಿತರಣೆ ಮಾಡಿದ ಸೇವೆ ಶ್ರೇಷ್ಠ ಸೇವೆ. ಇಂತಹ ಸೇವೆ ಘಟಕದಿಂದ ನಿರಂತರ ನಡೆಯಲಿ ಎಂದರು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಉಪ್ಪಿನಂಗಡಿ ಅಧ್ಯಕ್ಷರಾದ ರೋ.ಜಗದೀಶ್ ನಾಯಕ್, ಕಡಬ ರೋಟರಿ ಕ್ಲಬ್ ಪೂರ್ವಾಧ್ಯಕ್ಷ ರೋ.ಹರೀಶ್ ಶೆಟ್ಟಿ, ವಿದ್ಯಾ ಚೇತನಾ ವಿಶೇಷ ಮಕ್ಕಳ ಶಾಲೆಯ ಮುಖ್ಯಗುರು ಶ್ರೀಮತಿ ಶಶಿಕಲಾ, ಜೇಸಿಐ ಉಪ್ಪಿನಂಗಡಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಜೇಸಿ ಪ್ರಶಾಂತ್ ಕುಮಾರ್ ರೈ, ಉಪಾಧ್ಯಕ್ಷರಾದ ಜೇಸಿ ಆನಂದ ರಾಮಕುಂಜ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜೇಸಿ ಸಪ್ತಾಹದ ಸಹನಿರ್ದೇಶಕರಾದ ಸುರೇಶ್ ಅತಿಥಿಗಳನ್ನು ವೇದಿಕೆಗೆ ಬರಮಾಡಿಕೊಂಡರು.

ಘಟಕಾಧ್ಯಕ್ಷ ಜೇಸಿ ಮೋಹನ್ ಚಂದ್ರ ತೋಟದ ಅಧ್ಯಕ್ಷತೆ ವಹಿಸಿದ್ದರು.ಜೇಸಿ ಮಹೇಶ್ ಖಂಡಿಗ, ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ವಿಶೇಷ ಮಕ್ಕಳಿಗೆ ಶಿಕ್ಷಣ ಬೋಧಿಸುವ ಸಂಸ್ಥೆಯ ಶಿಕ್ಷಕರನ್ನು, ಸಿಬ್ಬಂದಿಗಳನ್ನು ಗೌರವಿಸಲಾಯಿತು.

Leave a Reply

You May Have Missed

error: Content is protected !!