ಬೆಳಾಲು : ಕಾಣೆಯಾಗಿದ್ದ ವ್ಯಕ್ತಿ ಹೊಳೆಯಲ್ಲಿ ಶವವಾಗಿ ಪತ್ತೆ

ಬೆಳಾಲು : ಕಾಣೆಯಾಗಿದ್ದ ವ್ಯಕ್ತಿ ಹೊಳೆಯಲ್ಲಿ ಶವವಾಗಿ ಪತ್ತೆ

ನೇಸರ ಸೆ.12: ಬೆಳಾಲು ಗ್ರಾಮದ ಮಾಯಾ ಮುಂಡ್ರೋಟ್ಟು ಮನೆಯ ದೇವಪ್ಪ ಪೂಜಾರಿ(85) ಎಂಬವರು ಸೆ.10 ಮನೆಯಿಂದ ನಾಪತ್ತೆಯಾಗಿದ್ದರು. ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು, ಮನೆಯವರು ಹಾಗೂ ಸ್ಥಳೀಯರು ಹೊಳೆ ಸೇರಿದಂತೆ ಅಲ್ಲಲ್ಲಿ ಸಾಕಷ್ಟು ಹುಡುಕಾಟ ನಡೆಸಿದ್ದರು.
ಸೆ.12ರಂದು ಇವರ ಶವ ಬೆಳಾಲು ಗ್ರಾಮದ ಇವರ ಮನೆ ಸಮೀಪದ ಅಮುಂಜಿ ಎಂಬಲ್ಲಿ ಪತ್ತೆಯಾಗಿದೆ.
ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪಿಎಸ್ ಐ ಅನಿಲ್ ಕುಮಾರ್ ನೇತೃತ್ವದಲ್ಲಿ ತನಿಖೆ ನಡೆದಿದೆ.

Leave a Reply

You May Have Missed

error: Content is protected !!