ನೆಲ್ಯಾಡಿ: ಜ್ಞಾನ ವಿಕಾಸ ಕೇಂದ್ರದಲ್ಲಿ ಬೀದಿನಾಟಕ ಕಾರ್ಯಕ್ರಮ

ನೆಲ್ಯಾಡಿ: ಜ್ಞಾನ ವಿಕಾಸ ಕೇಂದ್ರದಲ್ಲಿ ಬೀದಿನಾಟಕ ಕಾರ್ಯಕ್ರಮ

ನೇಸರ ಸೆ.17: ನೆಲ್ಯಾಡಿ ಧರ್ಮಶ್ರೀ ಮತ್ತು ಶಿವಾನಿ ಜ್ಞಾನ ವಿಕಾಸ ಕೇಂದ್ರದಲ್ಲಿ ಬೀದಿನಾಟಕ ಕಾರ್ಯಕ್ರಮವನ್ನು ಆಯೋಜಿಸಿದ್ದು ಜಾಗೃತಿಯ ಬಗ್ಗೆ ಮೊಬೈಲ್ ಬಳಕೆಯಿಂದ ಮಕ್ಕಳಲ್ಲಿ ಆಗುವ ದುಷ್ಪರಿಣಾಮಗಳು. ಸಂಚಾರಿ ನಿಯಮದ. ತ್ಯಾಜ್ಯ ವಸ್ತುಗಳ ವಿಲೇವಾರಿ ಹಾಗೂ ಹಸಿ ಕಸ ಮತ್ತು ಒಣ ಕಸ ವಿಂಗಡನೆಯ ಬಗ್ಗೆ ಪ್ಲಾಸ್ಟಿಕ್ ಎಲ್ಲೆಂದರಲ್ಲಿ ಬಿಸಾಡಿ ಇದರಿಂದ ಪ್ರಾಣಿಗಳ ಹಾಗೂ ಮನುಷ್ಯನ ದೇಹದಲ್ಲಿ ಆಗುವ ಪರಿಣಾಮಗಳ ಕುರಿತು ಸಂಸಾರ ಕಲಾ ತಂಡ ಬೀದಿನಾಟಕಗಳ ಮೂಲಕ ಕೇಂದ್ರದ ಸದಸ್ಯರಿಗೆ ಹಾಗೂ ಶಾಲೆಯ ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ನಡೆಯಿತು.
ಈ ಕಾರ್ಯಕ್ರಮವನ್ನು ಸರಕಾರಿ ಪ್ರಾಥಮಿಕ ಶಾಲೆ ನೆಲ್ಯಾಡಿಯ
ಮುಖ್ಯೋಪಾಧ್ಯಾಯರಾದ ಆನಂದ ಅಜಿಲ ಉದ್ಘಾಟಿಸಿದರು. ಕೌಕ್ರಾಡಿ ಒಕ್ಕೂಟದ ಅಧ್ಯಕ್ಷರು ಬಾಲಕೃಷ್ಣ ಗೌಡ ಅಧ್ಯಕ್ಷತೆ ವಹಿಸಿದ್ದರು. ವಲಯ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಜಯಾನಂದ ಬಂಟ್ರಿಯಾಲ್, ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ವಿಮಲ್ ಕುಮಾರ್, ಜ್ಞಾನವಿಕಾಸ ಕೇಂದ್ರದ ಸಮನ್ವಯ ಅಧಿಕಾರಿ ಚೇತನ ಉಪಸ್ಥಿತರಿದ್ದರು.
ಸೇವಾಪ್ರತಿನಿಧಿ ಹೇಮಾವತಿ ಕಾರ್ಯಕ್ರಮ ನಿರೂಪಿಸಿದರು. ಸವಿತಾ ಸ್ವಾಗತಿಸಿ. ಹೇಮಲತಾ ವಂದಿಸಿದರು. ಸೇವಾಪ್ರತಿನಿಧಿಯವರಾದ ಸುಮನಾ , ನಮಿತಾ ಶೆಟ್ಟಿ ಸಹಕರಿಸಿದರು.

Previous post

ನೂಜಿಬಾಳ್ತಿಲದಲ್ಲಿ ತಹಸೀಲ್ದಾರ್ ಗ್ರಾಮ ವಾಸ್ತವ್ಯ : ಕಾಡಾನೆ ಹಾವಳಿ ತಡೆಗೆ ಕಂದಕ ನಿರ್ಮಿಸುವಂತೆ ಆಗ್ರಹ

Next post

ಭಾರತವನ್ನು ಜಗತ್ತಿನ ಅತ್ಯಂತ ಎತ್ತರಕ್ಕೆ ಕೊಂಡೊಯ್ದ ದೇಶದ ಆದರ್ಶ ಪುರುಷ ಪ್ರಧಾನಿ ನರೇಂದ್ರ ಮೋದಿ – ನಳಿನ್ ಕುಮಾರ್ ಕಟೀಲ್

Leave a Reply

You May Have Missed

error: Content is protected !!