ಚಾಮುಂಡೇಶ್ವರಿ ಕ್ರೀಯೇಷನ್ ಪಡುಬೆಟ್ಟು ಇವರ “ಮರೆಯಲಾಗದ ಕ್ಷಣ” ಕಿರುಚಿತ್ರ ಬಿಡುಗಡೆ

ಚಾಮುಂಡೇಶ್ವರಿ ಕ್ರೀಯೇಷನ್ ಪಡುಬೆಟ್ಟು ಇವರ “ಮರೆಯಲಾಗದ ಕ್ಷಣ” ಕಿರುಚಿತ್ರ ಬಿಡುಗಡೆ

ನೇಸರ ಸೆ.19: ಪಡುಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಾಮುಂಡೇಶ್ವರಿ ಕ್ರೀಯೇಷನ್ ಪಡುಬೆಟ್ಟು ನೆಲ್ಯಾಡಿ, ಇವರ ಕೂಡುವಿಕೆಯಿಂದ ಮರೆಯಲಾಗದ ಕ್ಷಣ ಕಿರುಚಿತ್ರದ ಬಿಡುಗಡೆ ಕಾರ್ಯಕ್ರಮ ನೆರವೇರಿತು.
ನೆಲ್ಯಾಡಿ ಗ್ರಾಮ ಪಂಚಾಯತ್ ನ ಸದಸ್ಯ ರವಿಪ್ರಸಾದ್ ಶೆಟ್ಟಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಚಾಮುಂಡೇಶ್ವರಿ ಕ್ರಿಯೇಷನ್ ಪಡುಬೆಟ್ಟು ರವರು ನಿರ್ಮಿಸಿದ ಮರೆಯಲಾಗದ ಕ್ಷಣ ಕಿರು ಚಿತ್ರವನ್ನು ನಟ ನಿರ್ದೇಶಕ ರವಿ ರಾಮಕುಂಜ ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ರವಿ ರಾಮಕುಂಜ ರವರನ್ನು ಸನ್ಮಾನಿಸಲಾಯಿತು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಪ್ರಸಾದ್ ಬೀದಿಮನೆ ವಹಿಸಿದ್ದರು. ವೇದಿಕೆಯಲ್ಲಿ ಕಿರು ಚಿತ್ರದ ನಿರ್ದೇಶಕರಾದ ಶಿವರಾಮ್ ಅಳಿಕೆ, ಸಂಕಲನಕಾರ ಪ್ರವೀಣ್ ವಿಟ್ಲ, ಸಾಹಿತ್ಯ ಸಂಭಾಷಣೆ ಬರೆದ ಅನಿಲ್ ವಡಗೇರಿ, ಮಹಾಲಿಂಗ ಮಾಸ್ತರ್, ಸಲಾಂ ಬಿಲಾಲ್, ಪುಷ್ಪ. ಗೀತಾ, ಸೇಸಪ್ಪ, ಪಂಚಾಯತ್ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.
ಸ್ವಾಗತ ಹಾಗು ಧನ್ಯವಾದವನ್ನು ಕೆ.ಪಿ ಆನಂದ ಪಡುಬೆಟ್ಟು ನೆರವೇರಿಸಿದರು. ಶಂಕರ್ ಪಡುಬೆಟ್ಟು ನಿರೂಪಿಸಿದರು.

Previous post

ಧಾರ್ಮಿಕ ಕೇಂದ್ರಗಳ ಮೂಲಕ ಮಕ್ಕಳಲ್ಲಿ ಪ್ರಜಾಪ್ರಭುತ್ವದ ಬಗ್ಗೆ ಅರಿವು ಮೂಡಿಸುವ ಕಾರ್ಯ ಶ್ಲಾಘನೀಯ – ಪತ್ರಕರ್ತ ಮಹೇಶ್ ಪುಚ್ಚಪಾಡಿ

Next post

ಶ್ರೀರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ಹರ್ಷಿತ ಮತ್ತು ಕಾವ್ಯ ಖೋ ಖೋ ಪಂದ್ಯಾಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

Leave a Reply

You May Have Missed

error: Content is protected !!