ಕೊಣಾಲು ನಿವಾಸಿ ಕೃಷಿಕ ವಿಶ್ವನಾಥ ಗೌಡ ಹೃದಯಾಘಾತದಿಂದ ನಿಧನ

ನೇಸರ ಸೆ.23: ಸೆ.22ರಂದು ಬೆಳಗ್ಗೆ ಹೃದಯಾಘಾತದಿಂದ ಕಡಬ ತಾಲೂಕಿನ ಕೊಣಾಲು ಗ್ರಾಮದ ಶಾಂತಿಮಾರು ನಿವಾಸಿ ದಿ.ಬಾಲಪ್ಪ ಗೌಡರ ಪುತ್ರ ಕೃಷಿಕ ವಿಶ್ವನಾಥ ಯಾನೆ ವಾಸು(46ವ.)ರವರು ನಿಧನ.
ವಿಶ್ವನಾಥ್ ರವರು ಬೆಳಗ್ಗೆ ಪತ್ನಿಯೊಂದಿಗೆ ಗುಡ್ಡೆಯಿಂದ ಸೊಪ್ಪನ್ನು ತಂದು. ಮನೆಗೆ ಬಂದ ವೇಳೆ ತೀವ್ರವಾದ ಎದೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಆಟೋದಲ್ಲಿ ನೆಲ್ಯಾಡಿ ಯ ಅಶ್ವಿನಿ ಆಸ್ಪತ್ರೆಗೆ ಕರತರಲಾಯಿತು. ಆದರೆ ಆಸ್ಪತ್ರೆ ತಲುಪುವ ಮೊದಲೇ ಅವರು ಹೃದಯಾಘಾತದಿಂದ ಮೃತಪಟ್ಟಿದ್ದರು ಎಂದು ವರದಿಯಾಗಿದೆ
ಮೃತರು ತಾಯಿ ಯಮುನಾ, ಪತ್ನಿ ಪ್ರೇಮಲತಾ, ಪುತ್ರಿ ತೇಜಸ್ವಿ ಹಾಗೂ ಪುತ್ರ ಚಿಂತನ್ ಅವರನ್ನು ಅಗಲಿದ್ದಾರೆ.




















Leave a Reply