ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರ ಸಂಘ(.ನಿ) ಇದರ ಕಾಮಧೇನು ನಿಧಿ ಸ್ವ- ಸಹಾಯ ಸಂಘದ ಉದ್ಘಾಟನೆ

ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರ ಸಂಘ(.ನಿ) ಇದರ ಕಾಮಧೇನು ನಿಧಿ ಸ್ವ- ಸಹಾಯ ಸಂಘದ ಉದ್ಘಾಟನೆ

ನೆಲ್ಯಾಡಿ: ಕಾಮಧೇನು ಮಹಿಳಾ ಸಹಕಾರ ಸಂಘ(.ನಿ) ನೆಲ್ಯಾಡಿ ಕಡಬ ತಾಲೂಕು ಇದರ ಸಹಯೋಗದಲ್ಲಿ ದಿನಾಂಕ 04.10.2022 ರಂದು ಕಾಮಧೇನು ನಿಧಿ ಸ್ವ- ಸಹಾಯ ಸಂಘವನ್ನು ಕಾಮಧೇನು ಮಹಿಳಾ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀಮತಿ ಉಷಾ ಅಂಚನ್ ರವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.

ನಂತರ ಸಂಘದ ಸದಸ್ಯರಿಗೆ ದಾಖಲಾತಿಯನ್ನು ಹಸ್ತಾಂತರಿಸಿ ಮುಂದಿನ ದಿನಗಳಲ್ಲಿ ಸಂಘದ ಎಲ್ಲಾ ಸದಸ್ಯರು ಸಂಘದ ಎಲ್ಲಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಂಘವನ್ನು ಉತ್ತಮ ರೀತಿಯಲ್ಲಿ ಮುಂದುವರೆಸಿಕೊಂಡು ಹೋಗಬೇಕು ಎಂದು ಶುಭ ಹಾರೈಸಿದರು ಮತ್ತು ಸಂಘದ ನಿರ್ವಹಣೆಯ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀಮತಿ ಮೇಘನಾ, ಪ್ರವರ್ತಕರಾದ ಶ್ರೀಮತಿ ಸಂಪಾವತಿ, ಸಿಬ್ಬಂದಿಗಳಾದ ಶ್ರೀಮತಿ ಚೈತನ್ಯ, ಶ್ರೀಮತಿ ಸ್ವಾತಿ, ಸೇವಾಪ್ರತಿನಿಧಿ ಕುಸುಮಾ ಹಾಗೂ ಸಂಘದ ಅಧ್ಯಕ್ಷರಾದ ಶ್ರೀಮತಿ ನಳಿನಾಕ್ಷಿ, ಕಾರ್ಯದರ್ಶಿಯಾದ ಕು. ಪ್ರೀತಿ ಎಂ.ಕೆ, ಹಾಗೂ ಸದಸ್ಯರಾದ ಗಿರಿಜ,ಕಮಲ, ನೆಬಿಸ , ಯಶೋದ, ಕುಸುಮಾ, ಧನಲಕ್ಷ್ಮೀ ಉಪಸ್ಥಿತರಿದ್ದರು.

Leave a Reply

You May Have Missed

error: Content is protected !!