ಕಡಬದ ಕಳಾರ ನಿವಾಸಿ ನಿವೃತ್ತ ಶಿಕ್ಷಕ ಸ್ಕರಿಯ ನಿಧನ

ಕಡಬದ ಕಳಾರ ನಿವಾಸಿ ನಿವೃತ್ತ ಶಿಕ್ಷಕ ಸ್ಕರಿಯ ನಿಧನ

ಕಡಬ : ನಿವೃತ್ತ ಶಿಕ್ಷಕ ಕಡಬದ ಲಯನ್ಸ್ ಕ್ಲಬ್ ನ ಮಾಜಿ ಅಧ್ಯಕ್ಷರಾಗಿದ್ದ ಕಡಬ ತಾಲೂಕಿನ ಕಳಾರ ನಿವಾಸಿ ಸ್ಕರಿಯ(ವ.72) ಅವರು ಸ್ವಗೃಹದಲ್ಲಿ ಅಕ್ಟೋಬರ್ 18ರಂದು ನಿಧನ ಹೊಂದಿದರು.
ಶಿಕ್ಷಕರಾಗಿ ಒಟ್ಟು 33 ವರ್ಷಗಳ ಕಾಲ ಸೇವೆ ಸಲ್ಲಿಸಿದ ಇವರು, ಕಡಬದ ಸೈಂಟ್ ಜೋಕಿಮ್ಸ್ ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ ಸುಮಾರು 25 ವರ್ಷಗಳ ಕಾಲ ಸೇವೆ ಸಲ್ಲಿಸಿ ಬಳಿಕ ವರ್ಗಾವಣೆಗೊಂಡು, ಕೊಕ್ಕಡ ಸಮೀಪದ ಕೌಕ್ರಾಡಿ ಸೈಂಟ್ ಜೋನರ ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ ಸುಮಾರು 8 ವರ್ಷಗಳ ಕಾಲ ಸೇವೆ ಸಲ್ಲಿಸಿ ಅಲ್ಲಿ ನಿವೃತ್ತರಾಗಿದ್ದರು. ಶೈಕ್ಷಣಿಕವಾಗಿಯೂ ಹಾಗೂ ಸಾಮಾಜಿಕವಾಗಿ ಅನೇಕ ಸಂಘ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದರು.

Previous post

ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನ ಪ್ರಣಮ್‌ದೇವ ಮೊದಲ ಸ್ಥಾನ

Next post

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಿದ್ಯಾರ್ಥಿಗಳಿಂದ ಸ್ವಚ್ಛತಾ ಕಾರ್ಯಕ್ರಮ

Leave a Reply

You May Have Missed

error: Content is protected !!